ಉಡುಪಿ, ಜು. 08 (DaijiworldNews/TA): ವಿಪರೀತ ಮಳೆಯಿಂದಾಗಿ ಕರಾವಳಿಯಲ್ಲಿ ಕಡಲಿಗೆ ಇಳಿಯಲು ಹಿಂದೇಟು ಹಾಕಿದ್ದ ಸಾಂಪ್ರದಾಯಿಕ ಮೀನುಗಾರರು ಇದೀಗ ಮೀನುಗಾರಿಕೆಗೆ ಮುಂದಾಗಿದ್ದಾರೆ. ಮುಂಗಾರು ಅಬ್ಬರದ ಪ್ರವೇಶ ಹಿನ್ನೆಲೆ ಸ್ಥಗಿತಗೊಂಡಿದ್ದ ಮೀನುಗಾರಿಕೆ ಪರಿಣಾಮ ಮೀನುಗಳ ದರ ವಿಪರೀತ ಏರಿಕೆ ಕಂಡಿತ್ತು. ಇದೀಗ ಕೊನೆಗೂ ನಾಡ ದೋಣಿಗಳು ಸಮುದ್ರಕ್ಕೆ ಇಳಿದಿವೆ.

ಈ ಹಿನ್ನೆಲೆಯಲ್ಲಿ ಮೀನುಗಳ ಖಾದ್ಯಪ್ರಿಯರು ಇನ್ನಾದರೂ ಮೀನಿನ ದರ ಇಳಿಯಬಹುದು ಎಂದು ಕಾಯುತ್ತಿದ್ದಾರೆ. ಅಬ್ಬರದ ಗಾಳಿ ಮಳೆ ನಡುವೆ ನಾಡ ದೋಣಿಗಳಲ್ಲಿ ಮೀನು ಹಿಡಿಯುವುದೇ ಮೀನುಗಾರರಿಗೆ ಒಂದು ಸವಾಲಾಗಿರುತ್ತದೆ. ಇದೀಗ ಕಡಲ ಮಕ್ಕಳು ತಮ್ಮ ಜೀವನಾಧಾರಕ್ಕಾಗಿಮೀನುಗಾರಿಕೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಮಳೆಯ ಅಬ್ಬರವೂ ಕೊಂಚ ತನ್ನಗಾಗಿದ್ದರೂ ಮುಂಜಾಗ್ರತಾ ಕ್ರಮವನ್ನು ವಹಿಸಲಾಗಿದೆ.