ಮಂಗಳೂರು, ಜು. 08 (DaijiworldNews/TA): ಕಮಿಷನರೇಟ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬೈಕ್ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಜೂನ್ ತಿಂಗಳಲ್ಲೆ ಆರು ದ್ವಿಚಕ್ರ ವಾಹನ ಕಳವಾಗಿದೆ. ಹೆಚ್ಚಾಗಿ ಸ್ಕೂಟರ್ ಹಾಗು ಸ್ಪ್ಲೆಂಡರ್ ಬೈಕ್ಗಳೆ ಖದೀಮರ ಟಾರ್ಗೆಟ್ ಆಗಿದ್ದು, ನಾಲ್ಕು ಸ್ಕೂಟರ್ ಮತ್ತು ಎರಡು ಬೈಕ್ಗಳು ಕಳವಾಗಿದೆ. ಒಂದು ಕಡೆ ಪಾರ್ಕ್ ಮಾಡಿದ ಹತ್ತೆ ನಿಮಿಷದಲ್ಲಿ ಬೈಕ್ ಕಳವಾಗಿದ್ದು, ಇನ್ನೊಂದು ಕಡೆ 25 ನಿಮಿಷದಲ್ಲೆ ಕಳವು ಸಂಭವಿಸಿದೆ.

ಬೈಕ್ ಪಾರ್ಕ್ ಮಾಡುವ ಸ್ಥಳದ ಸಮೀಪವೇ ಕಳ್ಳರು ಹೊಂಚು ಹಾಕಿ ಕಾದುಕೂರುತ್ತಿದ್ಡಾರೆ. ಸ್ಟೇಟ್ ಬ್ಯಾಂಕ್,ನಾಗುರಿ,ಉಳ್ಳಾಲ,ಮುನ್ನೂರು,ಕೇಂದ್ರ ರೈಲು ನಿಲ್ದಾಣಗಳು ಕಳ್ಳರ ಕೇಂದ್ರಗಳು. ಉಳ್ಳಾಲದ ಮುನ್ನೂರು ಗ್ರಾಮದ ಸಂತೋಷ್ ನಗರದಲ್ಲಿ ಪಾರ್ಕ್ ಮಾಡಿದ 10 ನಿಮಿಷಕ್ಕೆ ಕಳವಾದರೆ, ಮುನ್ನೂರಿನ ಮದನಿ ನಗರದಲ್ಲಿ ಗ್ಯಾರೇಜ್ನಲ್ಲಿಟ್ಟಿದ್ದ ಸ್ಕೂಟರ್ ಕಳವಾಗಿದೆ. ನಾಗುರಿಯಲ್ಲಿ ಪಾರ್ಕ್ ಮಾಡಿದ 35 ನಿಮಿಷದೊಳಗೆ ಡೆಲಿವರಿ ಬಾಯ್ ಯ ಸ್ಕೂಟರ್ ಕಳವುಗೊಂಡಿದೆ.