ಕಡಬ, ಜು. 07 (DaijiworldNews/TA): ತಾಲೂಕಿನ ಸುಬ್ರಹ್ಮಣ್ಯ ಸೇರಿದಂತೆ ಗ್ರಾಮೀಣ ಪರಿಸರದಲ್ಲಿ ಜುಲೈ 6ರಂದು ಭಾರೀ ಗಾಳಿ ಮಳೆಯಾಗಿದೆ. ಅಪರಾಹ್ನದ ಗಾಳಿ ಮಳೆಗೆ ಸುಬ್ರಹ್ಮಣ್ಯ ಮುಖ್ಯರಸ್ತೆಯ ಕಾಶಿಕಟ್ಟೆಯ ಬಳಿ ಬೃಹತ್ ಮರವೊಂದು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದು, ಸಮೀಪದಲ್ಲಿದ್ದ ವಿದ್ಯುತ್ ಕಂಬಗಳು ಧಾರಾಶಾಹಿಯಾಗಿದೆ.


ಇದರಿಂದಾಗಿ ವಿದ್ಯುತ್ ತಂತಿಗಳು ಹಾನಿಗೊಳಗಾಗಿ, ವಿದ್ಯುತ್ ಸಂಚಾರದಲ್ಲಿ ವ್ಯತ್ಯಯಗೊಂಡಿತು. ಎರಡು ವಿದ್ಯುತ್ ಕಂಬಗಳು ಹಾನಿಗೊಂಡಿದ್ದು, ಮೆಸ್ಕಾಂ ಸಿಬ್ಬಂದಿಗಳು ಭಾರೀ ಮಳೆಯ ನಡುವೆಯು ವಿದ್ಯುತ್ ಕಲ್ಪಿಸುವಲ್ಲಿ ಕಾರ್ಯಪ್ರವೃತ್ತರಾದರು. ಮರವು ಮುಖ್ಯ ರಸ್ತೆಗೆ ಬೀಳದೆ ಪಕ್ಕದ ಖಾಲಿ ಜಾಗದ ಕಡೆ ಬಿದ್ದಿದೆ. ಈ ಸಮಯ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಯಾವುದೇ ವಾಹನ ಇಲ್ಲದಿರುವುದು ಹಾಗೂ ಜನ ಸಂಚಾರ ಇಲ್ಲದೆ ಇದ್ದುದರಿಂದ ಭಾರಿ ಅನಾಹುತ ತಪ್ಪಿದೆ.