ಕಾಸರಗೋಡು, ಜು. 07 (DaijiworldNews/TA): ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಲಾ ಸಾಂಸ್ಕೃತಿಕ ಘಟಕವಾದ ಸಂಸ್ಕಾರ ಸಾಹಿತಿ ಇದರ ಮಂಜೇಶ್ವರ ಅಸೆಂಬ್ಲಿ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಮತ್ತು ಸಾಧನಾಶೀಲರಿಗೆ ಪ್ರತಿಭಾ ಪುರಸ್ಕಾರ ವಿತರಣೆ ಉಪ್ಪಳ ಕೈಕಂಬ ಪಂಚಮಿ ಹಾಲ್ ನಲ್ಲಿ ಜರುಗಿತು. ಸಮಿತಿಯ ನಿಕಟಪೂರ್ವ ಅಧ್ಯಕ್ಷ: ಸಂಕಬೈಲು ಸತೀಶ್ ಅಡಪ್ಪರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಕೆ.ಪಿ.ಸಿ.ಸಿ ಕಾರ್ಯದರ್ಶಿ ಅಡ್ವಕೇಟ್ ಬಿ. ಸುಬ್ಬಯ್ಯ ರೈ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು 'ದೇಶದ ಸಾಂಸ್ಕೃತಿಕ ಇತಿಹಾಸ ಕಾಂಗ್ರೆಸ್ ಪಕ್ಷದ ಇತಿಹಾಸವಾಗಿದೆ, ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯಿಂದ ದೇಶವನ್ನು ಒಗ್ಗೂಡಿಸಲು ಸಾಧ್ಯವಿದೆ ಎಂದು ಅವರು ಹೇಳಿದರು. ಸಂಸ್ಕಾರ ಸಾಹಿತಿ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಕುಮಾರ್, ಜಿಲ್ಲಾ ಸಂಚಾಲಕ ದಿನೇಶನ್ ಸಂಘಟನೆಯ ಕುರಿತು ಮಾಹಿತಿಯನ್ನು ನೀಡಿದರು.ಹರ್ಷಾದ್ ವರ್ಕಾಡಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು
ಸಂಸ್ಕಾರ ಸಾಹಿತಿ ಮಂಜೇಶ್ವರ ಅಸೆಂಬ್ಲಿ ಸಮಿತಿಯ ನೂತನ ಪದಾಧಿಕಾರಿಗಳಾದ ರಾಘವೇಂದ್ರ ಭಟ್ ಪೈವಳಿಕೆ, ಹುಸೈನ್ ಮಂಗಲ್ಪಾಡಿ ಹಾಗೂ ವೇದಾವತಿ ವರ್ಕಾಡಿ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಅಭಿನವ್, ಅಬ್ದುಲ್ ಖಾದರ್ ಅತಾ ಹಾಗೂ ರಾಂಕ್ ವಿಜೇತೆ ಜೋಸ್ಲಿನ್ ಡಿ' ಸೋಜಾರವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಸುಂದರ ಆರಿಕ್ಕಾಡಿ, ಪಿ. ಸೋಮಪ್ಪ, ಕಂಚಿಲ ಮೊಹಮ್ಮದ್, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ. ಕೆ, ಗಣೇಶ್ ಭಂಡಾರಿ, ಹಮೀದ್ ಕಣಿಯೂರು, ಗೀತಾ ಬಂದ್ಯೋಡು, ಸತ್ಯನ್ ಸಿ, ಉಪ್ಪಳ, ಜುನೈದ್ ಉರುಮಿ, ಬಾಬು ಬಂದ್ಯೋಡು, ಜಗದೀಶ್ ಮೂಡಂಬೈಲು, ರವಿ ಪೂಜಾರಿ, ಪುರುಷೋತ್ತಮ ಅರಿಬೈಲು, ಎ .ಎಂ ಉಮರ್ ಕುಂಞ, ನಾಗೇಶ್ ಮಂಜೇಶ್ವರ, ಬರ್ನಾಡ್ ಡಿ' ಅಲ್ಮೇಡಾ, ಅಹಮದ್ ಮನ್ಸೂರ್, ಸದಾಶಿವ ಕೆ, ಅಝಿಝ್ ಕಲ್ಲೂರು, ಫಾರೂಕ್ ಶಿರಿಯಾ, ನಾರಾಯಣ ಏದಾರು, ಶರ್ಮಿಳಾ ಡಿ' ಪಿಂಟೋ, ಫಿಲೋಮಿನಾ ಮೋಂತೇರೋ, ನಾಸರ್ ಮೊಗ್ರಾಲ್, ರಫೀಕ್ ಕುಂಟಾರ್, ಮೊಹಮ್ಮದ್ ಬೆಜ್ಜ, ಮೊಹಮ್ಮದ್ ಹನೀಫ್ ಎಚ್.ಎ, ಶಾಜಿ, ವಿನೋದ್ ಕುಮಾರ್ ಪಾವೂರು, ಜೋಕಿಂ ಡಿ'ಸೋಜ, ಬಾತಿಶ್ ಅಹಮದ್, ಇಸ್ಮಾಯಿಲ್ ಪುರುಷಂಗೋಡಿ, ಶೇಕಬ್ಬ, ಗಂಗಾಧರ ಕೆ, ನೌಶಾದ್, ರಾಮ್ ಭಟ್ ಕೆರೆಮೂಲೆ, ಪುಟ್ಟ ನಾಯ್ಕ, ಅಬ್ದುಲ್ಲ ಹಾಜಿ, ಸುಂದರ ಸುದೆಂಬಳ, ಎಡ್ವರ್ಡ್, ಫೆಲಿಕ್ಸ್, ಗಂಗಾಧರ ಸಜಂಕಿಲ, ತನಿಯಪ್ಪ ಮಾಸ್ಟರ್, ಸುಂದರ ಜೋಡುಕಲ್ಲು, ಮೊಹಮ್ಮದ್ ಜೋಡುಕಲ್ಲು, ಪೀಟರ್, ವಿಕ್ಟರ್ ವೇಗಸ್, ಐರಿನ್ ಡಿ' ಸೋಜ, ನಾಸಿರ ಕೆ.ಬಿ, ಆಹಿಲ್, ಅಶ್ರಫ್ ಗಾಂಧಿನಗರ, ಫ್ರಾನ್ಸಿಸ್ ಡಿಸೋಜಾ ಮುಂತಾದವರು ಉಪಸ್ಥಿತರಿದ್ದರು. ಆರಿಫ್ ಮಚ್ಚಂಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.