ಉಡುಪಿ, ಜೂ. 11 (DaijiworldNews/AA): ಜ್ವರದಂತಹ ಕಾಯಿಲೆ ಬಂದಾಗ ಸಾಮಾನ್ಯವಾಗಿ ನಾವು ಅದನ್ನು ಸಣ್ಣ ಕಾಯಿಲೆಯೆಂದು ನಿರ್ಲಕ್ಷಿಸುತ್ತೇವೆ. ಆದರೆ ದೊಡ್ಡ ಕಾಯಿಲೆ ಬಂದಾಗ, ಅದು ರೋಗಿಯನ್ನು ಮಾತ್ರವಲ್ಲದೇ ಇಡೀ ಕುಟುಂಬವನ್ನು ಕಂಗಾಲಾಗಿಸುತ್ತದೆ.

ಉಡುಪಿ ಜಿಲ್ಲೆಯ ಶಿವಳ್ಳಿ ನಿವಾಸಿ ರೇಷ್ಮಾ ವೆರೋನಿಕಾ ರೆಬಾರಿಯೊ (46) ಪ್ರಸ್ತುತ ಅಂತಹದ್ದೇ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ ರೇಷ್ಮಾ ಅವರು ಹೊಟ್ಟೆಯ ಮೆಟಾಸ್ಟಾಟಿಕ್ ಕಾರ್ಸಿನೋಮ (ಕ್ಯಾನ್ಸರ್ನ ಒಂದು ರೂಪ) ಎಂಬ ಅಪರೂಪದ ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ವೈದ್ಯರು ರೇಷ್ಮಾ ಅವರಿಗೆ ಇರುವ ಕಾಯಿಲೆ ಬಗ್ಗೆ ತಿಳಿಸಿದಾಗ ಇಡೀ ಕುಟುಂಬಕ್ಕೆ ಸಿಡಿಲು ಬಡಿದಂತೆ ಭಾಸವಾಗಿತ್ತು.
ವಿಷಯ ತಿಳಿದು ರೇಷ್ಮಾ ಅವರ ಕುಟುಂಬಕ್ಕೆ ದೊಡ್ಡ ಆಘಾತ ಉಂಟಾಯಿತು. ಆದರೂ ಧೃತಿಗೆಡದೇ ಚಿಕಿತ್ಸೆಗಾಗಿ ಅವರು ನಿರಂತರವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದಾರೆ. ಹಲವು ವೈದ್ಯಕೀಯ ಪರೀಕ್ಷೆಗಳ ನಂತರ ರೇಷ್ಮಾ ಅವರಿಗೆ ವಿಶೇಷ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಇನ್ನು ಚಿಕಿತ್ಸೆಗಾಗಿ ಸುಮಾರು 25 ಲಕ್ಷ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
ರೇಷ್ಮಾ ಅವರ ಪತಿ ಅನ್ಸಿಲ್ ದಿನಗೂಲಿ ಕಾರ್ಮಿಕರಾಗಿದ್ದು, ಕುಟುಂಬದ ಏಕೈಕ ಆಧಾರವಾಗಿದ್ದಾರೆ. ಕುಟುಂಬದ ದೈನಂದಿನ ಖರ್ಚುಗಳನ್ನು ನಿಭಾಯಿಸಲು ಅವರು ದಣಿವರಿಯದೆ ಕೆಲಸ ಮಾಡುತ್ತಿದ್ದು, ಈಗ ತಮ್ಮ ಪತ್ನಿಯ ವೈದ್ಯಕೀಯ ವೆಚ್ಚಗಳ ಹೆಚ್ಚುವರಿ ಹೊರೆಯನ್ನು ಹೊತ್ತಿದ್ದಾರೆ.
ರೇಷ್ಮಾ ಅವರ ಕುಟುಂಬವು ಈಗ ದಾನಿಗಳಲ್ಲಿ, ದತ್ತಿ ಸಂಸ್ಥೆಗಳಲ್ಲಿ ಬೆಂಬಲಕ್ಕಾಗಿ ಮನವಿ ಮಾಡುತ್ತಿದೆ. ಸಹಾಯವು ಎಷ್ಟೇ ಚಿಕ್ಕದಾದರೂ ರೇಷ್ಮಾ ಅವರ ಬದುಕಿನಲ್ಲಿ ಮತ್ತು ಅವರ ಮಕ್ಕಳ ಭವಿಷ್ಯದಲ್ಲಿ ಗಮನಾರ್ಹ ವ್ಯತ್ಯಾಸವನ್ನುಂಟು ಮಾಡುತ್ತದೆ. ಆರ್ಥಿಕ ಸಹಾಯದ ಜೊತೆಗೆ, ಈ ಕಷ್ಟದ ಸಮಯದಲ್ಲಿ ಶಕ್ತಿ ಮತ್ತು ಸ್ಥೈರ್ಯಕ್ಕಾಗಿ ಕುಟುಂಬವು ನಿಮ್ಮ ಪ್ರಾರ್ಥನೆಯನ್ನು ಸಹ ಕೋರಿದೆ.
ರೇಷ್ಮಾ ಅವರ ಚಿಕಿತ್ಸೆಗೆ ನೀವು ಸಹಾಯ ಮಾಡಲು ಬಯಸಿದರೆ, ಈ ಕೆಳಗಿನ ಬ್ಯಾಂಕ್ ಖಾತೆಗೆ ದೇಣಿಗೆ ನೀಡಬಹುದು:
Reshma Veronica Rebario
AC No: 520101039080321
IFSC: UBIN0920941
Union Bank of India
Branch: Perampalli, Manipal
Contact: 9880061014