ಮಂಗಳೂರು, ಏ.29 (DaijiworldNews/AA): ಭಾರ್ಗವಿ ಬಿಲ್ಡರ್ಸ್ ಅವರಿಂದ ಮಂಗಳೂರಿನ ಕೊಟ್ಟಾರದ ಮಾಲೆಮಾರ್ ಬಳಿ ನಿರ್ಮಾಣಗೊಳ್ಳುತ್ತಿರುವ ಅತ್ಯಾಧುನಿಕ 'ಕೈಲಾಶ್' ವಸತಿ ಸಮುಚ್ಚಯ ಏ.30 ರಂದು ಲೋಕಾರ್ಪಣೆಗೊಳ್ಳಲಿದೆ.









ಈ ಹಿಂದೆ ಕೈಲಾಶ್ನಲ್ಲಿ ಗುಣನಾಥನ ಮೋಕ್ ಅಪ್ ಫ್ಲ್ಯಾಟ್ ಉದ್ಘಾಟನೆಗೊಂಡಿತ್ತು ಹಾಗೂ ಜನರಿಂದ ಅಭೂತಪೂರ್ವ ಸ್ಪಂದನೆಯೂ ವ್ಯಕ್ತವಾಗಿತ್ತು. ಇದೀಗ ಗ್ರಾಹಕರು ಬಹಳ ಕಾತುರತೆಯಿಂದ ಕಾಯುತ್ತಿದ್ದ ಕೈಲಾಶ್ ಲಕ್ಷುರಿ ಹೋಮ್ಸ್ ಉದ್ಘಾಟನೆಗೊಳ್ಳಲಿದೆ.
ಸಮಾರಂಭವನ್ನು ನಾಯಕ್ ಆಂಡ್ ಪೈ ಅಸೋಸಿಯೇಟ್ನ ಆರ್ಕಿಟೆಕ್ಟ್ ಸುರೇಶ್ ಪೈ, ನ್ಯಾಯವಾದಿ ಗೋಪಾಲ್ ಮಣಿಯಾಣಿ, ಕೈಲಾಶ್ ವಸತಿ ಸಮುಚ್ಚಯದ ರಾಯಭಾರಿ ಅರವಿಂದ ಬೋಳಾರ್, ಭಾರ್ಗವಿ ಬಿಲ್ಡರ್ಸ್ ನ ಮಾಲೀಕರಾದ ಭಾಸ್ಕರ್ ಗಡಿಯಾರ್, ಭಾರ್ಗವಿ ಗಡಿಯಾರ್, ಸಹ ಪ್ರವರ್ತಕರಾದ ವತ್ಸ ಕೊಜಪಾಡಿ ಮತ್ತಿತರ ಗಣ್ಯರು ನೆರವೇರಿಸಲಿದ್ದಾರೆ.
ಈ ಸಮುಚ್ಚಯದಲ್ಲಿ ಶೇ.90ರಷ್ಟು ಫ್ಲ್ಯಾಟ್ಗಳು ಬುಕ್ಕಿಂಗ್ ಆಗಿದ್ದು, ಇನ್ನು ಕೆಲವೇ ಫ್ಲ್ಯಾಟ್ಗಳು ಬಾಕಿ ಉಳಿದಿವೆ. 2 ಬಿಎಚ್ಕೆ 77 ಲಕ್ಷರೂ., 3 ಬಿಎಚ್ಕೆ 1.30 ಕೋ.ರೂ., 3 ಬಿಎಚ್ಕೆ ಡ್ಯುಪ್ಲೆಕ್ಸ್ ಫ್ಲ್ಯಾಟ್ಗೆ 1.80 ಕೋ.ರೂ. ದರ ನಿಗದಿಪಡಿಸಲಾಗಿದೆ. ಅಪಾರ್ಟ್ಮೆಂಟ್ನಲ್ಲಿ ಅತ್ಯಾಧುನಿಕ ಗುಣಮಟ್ಟದ ಸೌಲಭ್ಯ ದೊರೆಯಲಿದ್ದು, ರೂಫ್ಟಾಪ್ನಲ್ಲಿ ಸ್ವಿಮ್ಮಿಂಗ್ ಫೂಲ್ ನಿರ್ಮಾಣಗೊಂಡಿದೆ.
15 ಮಹಡಿಗಳಲ್ಲಿ 131 ಅಪಾರ್ಟ್ಮೆಂಟ್ಗಳು ವಾಸ್ತು ಪ್ರಕಾರವಾಗಿ ನಿರ್ಮಾಣ ಪೂರ್ಣಗೊಂಡಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕೈಲಾಶ್ ವಸತಿ ಸಮುಚ್ಚಯ ಐಷಾರಾಮಿ ಜೀವನ ಶೈಲಿಯನ್ನು ಒದಗಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು www.bhargavibuilders.comಗೆ ಭೇಟಿ ನೀಡಬಹುದು ಅಥವಾ 9611730555ಗೆ ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.