ಮಂಗಳೂರು, ಏ.27 (DaijiworldNews/AK):ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮು ಸೂಕ್ಷ್ಮ ಪ್ರದೇಶ ಎಂದೇ ಬಿಂಬಿಸಲಾಗುತ್ತಿದೆ. ಆದರೆ ಇದಕ್ಕೆ ಮೂಡುಶೆಡ್ಡೆ ಗ್ರಾಮದ ಎದುರುಪದವಿನ ಸೌಹಾರ್ದ ಬಳಗ ಇದನ್ನು ಅಲ್ಲಗೆಳೆದಿದೆ. ಕಳೆದ ಮೂರು ವರ್ಷಗಳಿಂದ ಸೌಹಾರ್ದ ಬಳಗ ಊರಿನ ಶಾಂತಿ ಮತ್ತು ಸಾಮರಸ್ಯವನ್ನು ಕಾಯ್ದುಕೊಳ್ಳುವಲ್ಲಿ ಮಾದರಿಯಾಗಿದೆ.




ಏಳು ಮಂದಿ ಸದಸ್ಯರಿಂದ ಆರಂಭವಾದ ಸೌಹಾರ್ದ ಬಳಗ, ಈಗ ಸರ್ವಧರ್ಮೀಯರ ಒಡನಾಟದ ವೇದಿಕೆಯಾಗಿ ಬೆಳಗುತ್ತಿದೆ. ಊರಿನ ಪ್ರತಿಯೊಂದು ಕಾರ್ಯಕ್ರಮಕ್ಕೂ ಈ ಬಳಗವೇ ಮುಂಚೂಣಿಯಲ್ಲಿರುತ್ತದೆ. ವಾರ್ಷಿಕ ಸಾರ್ವಜನಿಕ ಆಶ್ಲೇಷ ಪೂಜೆ , ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕಗಳು ಮತ್ತು ಸಾಮುದಾಯಿಕ ಸೇವೆಗಳ ಮೂಲಕ ಜಿಲ್ಲೆಯ ಏಕತೆಯನ್ನು ಕಾಪಾಡಲು ಶ್ರಮವಹಿಸುತ್ತಿದೆ.
ನಾವು ಜಾತಿ ಧರ್ಮಗಳ ಗಡಿ ಮೀರಿ ಒಗ್ಗಟ್ಟಾಗಬೇಕಿದೆ. ಅದನ್ನು ನಮ್ಮ ಬಳಗ ಮಾಡುತ್ತಿದೆ. ಪರಸ್ಪರ ಎಲ್ಲ ಧರ್ಮದವರು ಕೂಡಿ ಕಾರ್ಯಕ್ರಮ ಮಾಡಿದರೆ ಜಿಲ್ಲೆಯ ಸೌಹಾರ್ದ ತೆ ಕಾಪಾಡಬಹುದು ಎನ್ನುತ್ತಾರೆ ಸದಸ್ಯ ಲಕ್ಷ್ಮಿ ನಾರಾಯಣ್
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಮಂಗಳೂರು ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸುರೇಂದ್ರ ಕಂಬಳಿ ಅಡ್ಯಾರು ಗುತ್ತು, ಮೂಡುಶೆಡ್ಡೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಿವರಾಮ ಮಲ್ಲಿ, ಮೂಡುಶೆಡ್ಡೆ ವಲಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಶೆಟ್ಟಿ, ಎದುರುಪದವು ಶ್ರೀ ಕೋರ್ದಬ್ಬು ದೈವ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಮೈಯ್ಯದ್ದಿ, ಬೆಳಕು ಅಧ್ಯಕ್ಷ ಚಿತ್ತರಂಜನ್, ಆದಿಶಕ್ತಿ ಕನ್ಸ್ಟ್ರಕ್ಸನ್ಸ್ ಮಾಲಕ ಮಂಜುನಾಥ, ಶ್ರೀ ದುರ್ಗಾ ಚಾಮುಂಡೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಪದ್ಮನಾಭ ಕುಂದರ್, ಕೊರಗ ಕಾಲೋನಿ ಪ್ರಮುಖರಾದ ಎಸ್ ಬಾಬು, ಸೌಹಾರ್ದ ಬಳದ ಸದಸ್ಯರಾದ ರವಿ ಪೂಜಾರಿ, ಅಶ್ರಫ್, ಲಕ್ಷ್ಮಿ ನಾರಾಯಣ್, ಅಬ್ದುಲ್ ರಜಾಕ್, ಪ್ರವೀಣ್, ಜಯಂತಿ, ಪ್ಲೇವಿ ಸೇರಿದಂತೆ ಹಲವರು ಭಾಗವಹಿಸಿದ್ದರು.