ಉಡುಪಿ, ಏ.21 (DaijiworldNews/AA): ಶ್ರೀ ಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ಭಿಕ್ಷಾಟನೆಯಲ್ಲಿ ನಿರತರಾಗಿದ್ದ ನಾಲ್ವರು ಅಪ್ರಾಪ್ತರನ್ನು ಶನಿವಾರ ರಕ್ಷಣೆ ಮಾಡಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರ ಆದೇಶದ ಮೇರೆಗೆ ಈ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು.

ರಕ್ಷಿಸಲ್ಪಟ್ಟ ನಾಲ್ವರು ಅಪ್ರಾಪ್ತರನ್ನು ಕಾನೂನು ಪ್ರಕ್ರಿಯೆಗೆ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಯಿತು. ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ಅಂಬಿಕಾ ಕೆ.ಎಸ್., ಔಟ್ ರಿಚ್ ವರ್ಕರ್ ಸುನಂದಾ, ಬಾಲಕಾರ್ಮಿಕ ಸಂಘದ ಅಮೃತಾ, ಮಕ್ಕಳ ಸಹಾಯವಾಣಿಯ ಕೇಸ್ ವರ್ಕಗರ್ಗಳಾದ ಲಕ್ಷ್ಮೀಕಾಂತ್, ಸೌಮ್ಯಾ, ಸಮಾಜ ಕಲ್ಯಾಣ ಇಲಾಖೆಯ ಬಸವರಾಜು, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸವಿತಾ ಭಾಗಿಯಾಗಿದ್ದರು.