ಮೂಡಬಿದಿರೆ, ಏ.16(DaijiworldNews/TA): ಪ್ರಸಾದ್ ಆಚಾರ್ಯ ದಂಪತಿಗಳ ಚಿಕಿತ್ಸೆಗೆ ಯೂತ್ಸ್ ಆಫ್ ವಿಶ್ವಕರ್ಮ ಗ್ರೂಪ್ ನೆರವಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಮೂಡಬಿದಿರೆ ತೋಡಾರು ಗ್ರಾಮದ ನಿವಾಸಿ ಪ್ರಸಾದ್ ಆಚಾರ್ಯ ಹಾಗೂ ಶಮಿತಾ ಆಚಾರ್ಯ ದಂಪತಿಗಳು ದಿನಾಂಕ ಎಪ್ರಿಲ್ 5 ರಂದು ಬೆಳುವಾಯಿಯಲ್ಲಿ ನಡೆದ ವಾಹನ ಅಪಘಾತದಲ್ಲಿ ತೀರ್ವವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದು, ಈ ವಿಚಾರವನ್ನು ತಿಳಿದು ಯೂತ್ಸ್ ಆಫ್ ವಿಶ್ವಕರ್ಮ ಗ್ರೂಪ್ ನ ಸದಸ್ಯರು ರೂ.1,20,000 ಹಣವನ್ನು ಒಗ್ಗೂಡಿಸಿ ಪ್ರಸಾದ್ ಆಚಾರ್ಯ ದಂಪತಿಗಳ ಚಿಕಿತ್ಸೆಗೆ ನೆರವಾಗಿದ್ದಾರೆ.
ಯೂತ್ಸ್ ಆಫ್ ವಿಶ್ವಕರ್ಮ ಗ್ರೂಪ್ ಸಮಾಜಕ್ಕೆ ಒಳ್ಳೆಯ ಮಾದರಿಯಾಗಿದೆ. ಸದಸ್ಯರ ಸಮಾಜಮುಖಿ ಚಿಂತನೆ ಹಾಗೂ ಕಾರ್ಯಕ್ಕೆ ಸಂಸ್ಥಾಪಕರು ಹಾಗೂ ಸಲಹೆಗಾರರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಒಂದು ತಂಡ ಪ್ರಾರಂಭವಾದ 1ವರ್ಷದ ಒಳಗಿನ ಅವಧಿಯಲ್ಲಿ 20 ಕುಟುಂಬದ ಸಹಾಯಕ್ಕೆ ಒಟ್ಟು 6,20,000 ವರೆಗೆ ಧನ ಸಹಾಯ ಮಾಡುವ ಮುಖಾಂತರ ನೆರವಾಗಿದೆ.