ಉಡುಪಿ,,ಏ.10(DaijiworldNews/AK): ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಕಂಬಳ ಮನೆ ದಿನೇಶ್ ಶೆಟ್ಟಿ ಏಪ್ರಿಲ್ 9 ರಂದು ಆಯ್ಕೆಯಾಗಿದ್ದಾರೆ.

ಸಮಿತಿಯಲ್ಲಿ ಅರ್ಚಕರಾದ ಪಾಂಡುರಂಗ ನಾಯಕ್, ಗರಡಿಮನೆಯ ಶೇಖರ್ ಸುವರ್ಣ, ಲಕ್ಷ್ಮಿನಾರಾಯಣ ರಾವ್, ಕಂಬಳ ಮನೆ ದಿನೇಶ್ ಶೆಟ್ಟಿ, ಉಮೇಶ್ ಎಸ್ ಶೆಟ್ಟಿಗಾರ್, ಶಂಕರ್ ಆಚಾರ್ಯ, ವಿಜಯಲಕ್ಷ್ಮಿ ಎಂ, ಮತ್ತು ಚಂದ್ರಾವತಿ ಸೇರಿದಂತೆ ಹಲವಾರು ಸದಸ್ಯರು ಇದ್ದಾರೆ.
ದೇವಾಲಯದ ಆಡಳಿತಾಧಿಕಾರಿ ರೇಷ್ಮಾ ಅವರು ನೂತನ ಅಧ್ಯಕ್ಷ ದಿನೇಶ್ ಶೆಟ್ಟಿ ಅವರಿಗೆ ದೇವಾಲಯದ ಕೀಲಿಕೈಗಳನ್ನು ಅಧಿಕೃತವಾಗಿ ಹಸ್ತಾಂತರಿಸಿದರು.