ಮಂಗಳೂರು, ಏ.10(DaijiworldNews/AK): ಒಂದು ತಿಂಗಳ ಕಾಲ ನಡೆಯುವ ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವ ಸಾಂಪ್ರದಾಯಿಕ 'ಚೆಂಡು ಆಟದೊಂದಿದೆ' ಸಮಾಪ್ತಿಯಾಯಿತು.















ಎಪ್ರಿಲ್ 9 ರಂದು ನಡೆದ 'ಚೆಂಡು' ಆಟಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ವಾರ್ಷಿಕ ಜಾತ್ರೆಯ ಕೊನೆದಿನವಾದ ಎಪ್ರಿಲ್ 10 ರಂದು ಅದ್ದೂರಿ ಪೊಳಲಿ ರಥೋತ್ಸವ ನಡೆಯಿತು.
ಪೊಳಲಿ ರಾಜರಾಜೇಶ್ವರಿ ದೇವಸ್ಥಾನವು ಕರ್ನಾಟಕ ಕರಾವಳಿಯ ಅತ್ಯಂತ ಪ್ರಾಚೀನ ಮತ್ತು ಭವ್ಯವಾದ ದೇವಾಲಯಗಳಲ್ಲಿ ಒಂದಾಗಿದ್ದು, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಇಲ್ಲಿನ ವಾರ್ಷಿಕ ಜಾತ್ರೆಗೆ ವಿಶೇಷ ಮಹತ್ವವಿದ್ದು ದೇಶವಿದೇಶಗಳಿಂದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ಪುನೀತರಾಗುತ್ತಾರೆ.