ಕಠ್ಮಂಡು, ಆ. 10 (DaijiworldNews/MB) : "ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ, ಭಾರತದಲ್ಲಿಲ್ಲ" ಎಂದು ಈ ಮೊದಲು ಹೇಳಿದ್ದ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಇದೀಗ ಕೃತಕ ರಾಮಜನ್ಮಭೂಮಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನೇಪಾಳದಲ್ಲಿ ಅಯೋಧ್ಯಾಪುರಿಯೆಂಬ ಎಂಬ ಹೊಸ ಹೆಸರನ್ನು ಹುಟ್ಟು ಹಾಕಿದ್ದಾರೆ.
ಚೆತ್ವಾನ್ ಜಿಲ್ಲೆಯ ಮಡಿಯ ಮೇಯರ್ ಜತೆ ಸುದೀರ್ಘ 2 ಗಂಟೆಗಳ ಕಾಲ ಸಭೆ ನಡೆಸಿದರುವ ಒಲಿ, ಮಡಿಯ ಪುರಸಭೆಯನ್ನು ಅಯೋಧ್ಯಾಪುರಿಯೆಂದು ಮರುನಾಮಕರಣ ಮಾಡಲು ಸೂಚಿಸಿದ್ದಾರೆ.
ಅಷ್ಟು ಮಾತ್ರವಲ್ಲದೇ ಅಲ್ಲಿ ರಾಮನ ಬೃಹತ್ ಆದ ವಿಗ್ರಹ ನಿರ್ಮಿಸಿ, ಅಯೋಧ್ಯಾಪುರಿಯನ್ನು ರಾಮನ ಜನ್ಮಸ್ಥಳ ಎಂದು ಪ್ರಚಾರ ಪಡಿಸಬೇಕು ಎಂದು ಸೂಚನೆ ನೀಡಿದ್ದಾರೆ. ಹಾಗೆಯೇ ರಾಮ್ ಜನ್ಮಭೂಮಿ ಅಯೋಧ್ಯ ಧಾಮದ ಕೆಲಸವನ್ನು ಪ್ರಾರಂಭಿಸಲು ಸೂಚನೆ ನೀಡಿದ್ದಾರೆ.
ಈ ವರ್ಷ ರಾಮ ನವಮಿಯನ್ನು ಅಯೋಧ್ಯಾಪುರಿ ಎಂದು ತಾನಾಗಿಯೇ ಹುಟ್ಟು ಹಾಕಿರುವ ಪ್ರದೇಶದಲ್ಲಿ ರಾಮ, ಲಕ್ಷ್ಮಣ, ಸೀತಾ ಮತ್ತು ಹನುಮಾನ ವಿಗ್ರಹಗಳನ್ನು ಇರಿಸುವ ನಿರ್ಧಾರವನ್ನು ಒಲಿ ಕೈಗೊಂಡಿದ್ದಾರೆ.
ಇನ್ನು ನವಮಿ ಸಂದರ್ಭದಲ್ಲಿ ಒಲಿ ನೇಪಾಳದಲ್ಲಿ ಸೃಷ್ಟಿಸಲಾಗುವ ಕೃತಕ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ನಡೆಸಿ ಮಂದಿರ ನಿರ್ಮಾಣ ಕಾರ್ಯ ಆರಂಭಿಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೆಲವು ದಿನಗಳ ಹಿಂದೆ, ದಕ್ಷಿಣ ನೇಪಾಳದ ಅಯೋಧ್ಯಪುರಿ ರಾಮನ ಜನ್ಮಭೂಮಿ ಎಂದು ಒಲಿ ಹೇಳಿಕೊಂಡಿದ್ದು ಇದೀಗ ಭಾರತದಲ್ಲಿ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುತ್ತಿದ್ದಂತೆ ರಾಮ ಜನ್ಮಭೂಮಿ ಇರುವುದು ನೇಪಾಳದಲ್ಲಿ ಎಂದು ಬಿಂಬಿಸಲು ರಾಮ ಮಂದಿರ ನಿರ್ಮಾಣಕ್ಕೂ ಮುಂದಾಗಿದ್ದಾರೆ.
ಸೀತಾ ದೇವಿಯು ನೇಪಾಳದ ಜನಕ ಪುರದಲ್ಲಿ ಜನಿಸಿದ್ದು ಪ್ರತೀ ವರ್ಷವೂ ರಾಮನ ವಿವಾಹ ಉತ್ಸವವು ಅಯೋಧ್ಯೆಯಿಂದ ಜನಕ ಪುರಕ್ಕೆ ತೆರಳುತ್ತದೆ.
ಇನ್ನು ಜೂನ್ನಲ್ಲಿ ನೇಪಾಳ ಸಂಸತ್ತಿನಲ್ಲಿ ಭಾರತದ ಕೆಲವು ಭಾಗಗಳನ್ನು ಒಳಗೊಂಡ ನಕ್ಷೆಯನ್ನು ಅನುಮೋದಿಸಲಾಗಿದೆ.