ಬಹರೈನ್, ಆ 09 (DaijiworldNews/PY): ಕೊರೊನಾ ಕಾರಣದಿಂದ ಬಹರೈನ್ನಲ್ಲಿ ಸಂಕಷ್ಟಕ್ಕೆ ಒಳಗಾಗಿರುವ 170 ಅನಿವಾಸಿ ಕನ್ನಡಿಗರನ್ನು ಆಗಸ್ಟ್ 06ರಂದು ಭಾರತಕ್ಕೆ ಕೆ.ಸಿ.ಎಫ್ ಸಂಘಟನೆಯ ಚಾರ್ಟರ್ ವಿಮಾನ ಹೊತ್ತು ಬಂದಿದೆ.
ಹಾಜಿ ಅಬೂಬಕ್ಕರ್
ವಿಮಾನಯಾನ ರದ್ದಾದ ಕಾರಣದಿಂದಾಗಿ ಊರಿಗೆ ಹೋಗಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದ ಅನಿವಾಸಿ ಕನ್ನಡಿಗರಿಗೆ ಕೆ.ಸಿ.ಎಫ್ ವತಿಯಿಂದ ಚಾರ್ಟರ್ ವಿಮಾನ ವ್ಯವಸ್ಥೆ ಮಾಡಲಾಗಿದ್ದು ಆಗಸ್ಟ್ 06ರಂದು ಬಹರೈನ್ ಸಮಯ ಬೆಳಿಗ್ಗೆ 9-15 ಕ್ಕೆ ಹೊರಟ ವಿಮಾನವು ಸಂಜೆ 4 :30 ಕ್ಕೆ ಮಂಗಳೂರು ತಲುಪಿತು. ವೀಸಾ ಕಾಲಾವಧಿ ಮುಗಿದವರು, ನಿರುದ್ಯೋಗಿಗಳು, ಗರ್ಭಿಣಿಯರು ಸೇರಿದಂತೆ 170 ಮಂದಿ ವಿಭಿನ್ನ ಸಂತ್ರಸ್ತರು ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿದರು. ಹಾಗೆಯೇ ಕೆಸಿಎಫ್ ಬಹರೈನ್ ನಿಂದ ಮಂಗಳೂರಿಗೆ ಪ್ರಥಮವಾಗಿ ಚಾರ್ಟರ್ಡ್ ವಿಮಾನ ಆಯೋಜಿಸಿದೆ.
ಪ್ರಯಾಣಿಕರಿಗೆ ಬೇಕಾದ ಅಗತ್ಯ ದಾಖಲೆಗಳು, ಆರೋಗ್ಯ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ನೀಡಲಾಗಿದ್ದು ಕೊರೊನಾ ಹರಡುವಿಕೆಯ ಮುನ್ನೆಚ್ಚರಿಕೆಯಾಗಿ ಪಿ.ಪಿ.ಇ ಕಿಟ್ ಸಮಿತಿಯ ವತಿಯಿಂದ ನೀಡಲಾಗಿತ್ತು.
ಸರ್ಕಾರದ ಅನುಮತಿಯನ್ನು ಪಡೆಯಲು ಹಾಗೂ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಯಾತ್ರಿಕರನ್ನು ಬರಮಾಡಿಕೊಂಡು ಅವರಿಗೆ ಬೇಕಾದ ಕ್ವಾರಂಟೈನ್ ವ್ಯವಸ್ಥೆಯನ್ನು ಮಾಡಲು ಕರ್ನಾಟಕ ಮುಸ್ಲಿಮ್ ಜಮಾತ್, ಎಸ್.ವೈ.ಎಸ್ ಹಾಗೂ ಕೆ.ಸಿ.ಎಫ್ ಐಎನ್ಸಿ ಸಹಕಾರ ನೀಡಿದೆ.
ಕೆ.ಸಿ.ಎಫ್ ಅಂತರ್ ರಾಷ್ಟ್ರೀಯ ಸಮಿತಿಯ ಇಹ್ಸಾನ್ ವಿಭಾಗದ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ಅವರು ಬಹರೈನ್ ಕೆ.ಸಿ.ಎಫ್ ಚಾರ್ಟರ್ ಫ್ಲೈಟ್ ಗೆ ಆಸರೆಯಾಗಿದ್ದಾರೆ.