ಬೈರೂತ್, ಆ 08 (DaijiworldNews/PY): ಕಳೆದ ಆರು ವರ್ಷಗಳಲ್ಲಿ ಕನಿಷ್ಠ ಹತ್ತು ಬಾರಿ ಲೆಬನಾನ್ನ ಪ್ರಮುಖ ಇಲಾಖೆಗಳು ಸೇರಿದಂತೆ ಕೆಲವು ಸಂಸ್ಥೆಗಳು, ಬೈರುತ್ನಲ್ಲಿ ಯಾವುದೇ ಸುರಕ್ಷತೆಯಿಲ್ಲದೆ ಸ್ಫೋಟಕ ರಾಸಾಯನಿಕಗಳ ಬೃಹತ್ ದಾಸ್ತಾನು ಮಾಡಲಾಗಿದೆ ಎಂದು ಎಚ್ಚರಿಸಿದ್ದವು ಎನ್ನುವ ವಿಚಾರಗಳು ದಾಖಲೆಗಳಿಂದ ತಿಳಿದುಬಂದಿದೆ.
ಈ ವಿಚಾರವಾಗಿ ಲೆಬನಾನ್ನ ಕಸ್ಟಮ್ಸ್, ಮಿಲಿಟರಿ, ಸೆಕ್ಯುರಿಟಿ ಏಜೆನ್ಸಿಗಳು ಮತ್ತು ನ್ಯಾಯಾಂಗ ಅಧಿಕಾರಿಗಳು ಹಲವು ಬಾರಿ ಎಚ್ಚರಿಕೆ ನೀಡಿರುವ ಬಗ್ಗೆ ದಾಖಲೆಗಳು ದೊರೆತಿದ್ದು, ಈ ವಿಷಯ ಬೆಳಕಿಗೆ ಬಂದಿದೆ.
2016ರಿಂದ ಅಧಿಕಾರದಲ್ಲಿರುವ ಅಧ್ಯಕ್ಷ ಮೈಕಲ್ ಔನ್, ಸುಮಾರು ಮೂರು ವಾರಗಳ ಹಿಂದೆ ಅಪಾಯಕಾರಿ ದಾಸ್ತಾನಿನ ಬಗ್ಗೆ ತಿಳಿಸಲಾಯಿತು. ಅಲ್ಲದೇ, ತಕ್ಷಣವೇ ಮಿಲಿಟರಿ ಹಾಗೂ ಭದ್ರತಾ ಸಂಸ್ಥೆಗಳಿಗೆ ಅಗತ್ಯವಾದ ವ್ಯವಸ್ಥೆ ಮಾಡಲು ಆದೇಶ ನೀಡಿದರು. ಆದರೆ, ಬಂದರಿನ ಮೇಲೆ ನನಗೆ ಯಾವ ಅಧಿಕಾರವಿಲ್ಲ. ಹಿಂದಿನ ಸರ್ಕಾರಕ್ಕೆ ಇದರ ಅಸ್ತಿತ್ವದ ಬಗ್ಗೆ ತಿಳಿಸಲಾಗಿದೆ ಎಂದರು.
ಸ್ಪೋಟದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರಗೊಳ್ಳುತ್ತಿರುವ ದಾಖಲೆಗಳು, ಲೆಬನಾನ್ನ ದೀರ್ಘಕಾಲದ ಆಡಳಿತದ ಭ್ರಷ್ಟಾಚಾರ, ನಿರ್ಲಕ್ಷ್ಯ ಹಾಗೂ ಅಸಮರ್ಥತೆಯನ್ನು ಒತ್ತಿ ಹೇಳುತ್ತವೆ. ಹಾಗೂ ತನ್ನ ಜನರಿಗೆ ಭದ್ರತೆ ಸೇರಿದಂತೆ ಮೂಲಭೂತ ಅಗತ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ.
ಬೈರುತ್ ಬಂದರಿನಲ್ಲಿರುವ ಸಿಬ್ಬಂದಿಗಳ ಮೇಲೆ ಕೇಂದ್ರೀಕರಿಸಿದ್ದು, ಇಲ್ಲಿಯವರೆಗೆ ಕನಿಷ್ಠ 16 ಬಂದರು ನೌಕರರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.