ಬೈರೂತ್, ಆ. 05 (DaijiworldNews/MB) : ಮಂಗಳವಾರ ಲೆಬನಾನ್ ರಾಜಧಾನಿ ಬೈರೂತ್ನಲ್ಲಿ ಭಾರೀ ಪ್ರಮಾಣದ ಅವಳಿ ಸ್ಫೋಟ ಸಂಭವಿಸಿದ್ದು, ಸುಮಾರು 70 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
ಈ ಭಾರೀ ಸ್ಫೋಟದಿಂದಾಗಿ ಅಕ್ಕಪಕ್ಕದ ಹಲವು ಕಟ್ಟಡಗಳು ಧ್ವಂಸಗೊಂಡಿದ್ದು, ಕಟ್ಟಡಗಳು ತೀವ್ರ ಹಾನಿಯಾಗಿದೆ. ಅಷ್ಟೇ ಅಲ್ಲದೇ ಬಂದರು ಸಮೀಪದಲ್ಲೇ ನಡೆದ ಸ್ಫೋಟದಿಂದ ಈ ಸ್ಪೋಟದಿಂದಾಗಿ ಸಮುದ್ರದ ನೀರು ಮೇಲೆ ಚಿಮ್ಮಿ ಭಾರೀ ಹಾನಿಯುಂಟಾಗಿದೆ. ಈ ಸ್ಪೋಟದ ಸದ್ದು 200 ಕಿಮೀ ದೂರದವರೆಗೂ ಕೇಳಿ ಬಂದಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಸ್ಥಳಕ್ಕೆ ಆ್ಯಂಬುಲೆನ್ಸ್ ಗಳು ಹಾಗೂ ಸೇನಾ ಹೆಲಿಕಾಪ್ಟರ್ ಗಳು ಕೂಡಲೇ ಆಗಮಿಸಿ ಕಾರ್ಯಚರಣೆ ಆರಂಭಿಸಿದ್ದು, ರಕ್ಷಣಾ ಕಾರ್ಯಗಳು ನಡೆಸಲಾಗುತ್ತಿದೆ.
ಇನ್ನು ಆಸ್ಪತ್ರೆಯಲ್ಲಿ ಹಲವಾರು ಜನರು ದಾಖಲಾಗಿದ್ದು ಆಸ್ಪತ್ರೆಯ ಸಿಬ್ಬಂದಿಗಳು ರಕ್ತದಾನ ಮಾಡುವಂತೆ ಜನರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.