ಕುವೈತ್, ಆ. 02 (DaijiworldNews/MB) : ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕುವೈತ್ ದೇಶ ಭಾರತ ಸೇರಿದಂತೆ 31 ಹೈರಿಸ್ಕ್ ದೇಶಗಳಿಗೆ ವಿಮಾನ ಸಂಚಾರವನ್ನು ನಿಷೇಧಿಸಿ ಶನಿವಾರ ಆದೇಶ ಹೊರಡಿಸಿದೆ.
ಕುವೈತ್ ದೇಶವು, ಭಾರತ, ಸಿಂಗಾಪುರ, ಇಟಲಿ, ಸಪೇನ್, ಹಾಂಕಾಂಗ್, ಚೀನಾ, ಶ್ರೀಲಂಕಾ, ನೇಪಾಳ, ಮೆಕ್ಸಿಕೊ, ಇಂಡೋನೇಷ್ಯಾ, ಚಿಲಿ, ಪಾಕಿಸ್ತಾನ, ಈಜಿಪ್ಟ್, ಇರಾನ್, ಬ್ರೆಝಿಲ್, ಕೊಲಂಬಿಯಾ, ಬಾಂಗ್ಲಾದೇಶ ಹಾಗೂ ಫಿಲಿಫಿನ್ಸ್ ಸೇರಿದಂತೆ ಒಟ್ಟು 31 ದೇಶಗಳಿಗೆ ವಿಮಾನ ಸಂಚಾರವನ್ನು ನಿಷೇಧಿಸಿದೆ.
ಕೊರೊನಾ ಸಂಕಷ್ಟದಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲು ಹಾಗೂ ವಿದೇಶಗಳಲ್ಲಿ ಕೆಲಸ ಮಾಡುವ ಭಾರತೀಯರಿಗೆ ಸಂಚಾರ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಟ್ರಾನ್ಸ್ಪೋರ್ಟ್ ಬಬಲ್ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಭಾರತೀಯ ವಿಮಾನಯಾನ ಇಲಾಖೆ ಅಧಿಕಾರಿಗಳು ಪ್ರಕಟಿಸಿದ್ದು ಇದರ ಬೆನ್ನಲ್ಲೇ ಈ ಆದೇಶವನ್ನು ಕುವೈತ್ ಪ್ರಕಟಿಸಿದೆ.
ಇನ್ನು ಕುವೈತ್ನ ಈ ಆದೇಶದಿಂದಾಗಿ ಈ ವಿಶೇಷ ಪ್ರಯಾಣ ಒಪ್ಪಂದಕ್ಕೆ ಧಕ್ಕೆ ಉಂಟಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.