ನ್ಯೂಯಾರ್ಕ್, ಜು 30 (DaijiworldNews/PY): ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಯ ಅದ್ಭುತ ಸಮಾರಂಭವನ್ನು ಆಚರಣೆ ಮಾಡಲು ನ್ಯೂಯಾರ್ಕ್ನ ಐಕಾನಿಕ್ ಟೈಮ್ ಸ್ಕ್ವೇರ್ನಲ್ಲಿ ಸಿದ್ದತೆ ನಡೆಯುತ್ತಿವೆ.
ಆಗಸ್ಟ್ 5ರಂದು ನ್ಯೂಯಾರ್ಕ್ನಲ್ಲಿ ಐತಿಹಾಸಿಕ ಕ್ಷಣವನ್ನು ಆಚರಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಮೆರಿಕನ್ ಇಂಡಿಯಾ ಸಾರ್ವಜನಿಕ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಜಗದೀಶ್ ಶೇವಾನಿ ಹೇಳಿದ್ದಾರೆ.
ಟೈಮ್ಸ್ ಸ್ಕ್ವೇರ್ನಲ್ಲಿ, ಪ್ರಮುಖ ಜಾಹೀರಾತು ಬೃಹತ್ ನಾಸ್ಡಾಕ್ ಪರದೆ ಮತ್ತು 17,000 ಚದರ ಅಡಿಯಷ್ಟು ಎತ್ತರದ ಎಲ್ಇಡಿ ಡಿಸ್ಪ್ಲೆ ಪರದೆಯನ್ನು ಅಳವಡಿಸಲಾಗಿದ್ದು, ಅತಿ ಹೆಚ್ಚು ರೆಸಲ್ಯೂಶನ್ ಹೊಂದಿರುವ ಬಾಹ್ಯ ಎಲ್ಇಡಿ ಪರದೆಗಳನ್ನು ಕೂಡಾ ಅಳವಡಿಸಲಾಗಿದೆ ಎಂದು ಶೇವಾನಿ ಹೇಳಿದರು.
ಆಗಸ್ಟ್ 5 ರಂದು ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಜೈ ಶ್ರೀ ರಾಮ ಪದಗಳ ಚಿತ್ರಗಳು, ಶ್ರೀರಾಮನ ಚಿತ್ರಗಳು ಮತ್ತು ವೀಡಿಯೊಗಳು, ದೇವಾಲಯದ ವಿನ್ಯಾಸಗಳು ಹಾಗೂ ರಾಮ ಮಂದಿರದ 3ಡಿ ಪೋಸ್ಟರ್ಗಳು, ಮಂದಿರದ ಒಳಗಿರುವ ವಾಸ್ತು ಶಿಲ್ಪ, ಅಲ್ಲದೇ, ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ಭೂಮು ಪೂಜೆ ಮಾಡುವ ದೃಶ್ಯಗಳನ್ನು ಪ್ರಸಾರ ಮಾಡಲಾಗುವುದು ಎಂದು ತಿಳಿಸಿದರು.
ಇದು ಜೀವಮಾನದಲ್ಲಿ ನಡೆಯುವ ಒಂದು ಐತಿಹಾಸಿಕ ಸಮಾರಂಭ. ಇಲ್ಲಿರುವ ಎಲ್ಲಾ ಭಾರತೀಯರು ಭೂಮಿ ಪೂಜೆಯಂದು ಟೈಮ್ ಸ್ಕ್ವೇರ್ಗೆ ಬರುತ್ತಾರೆ. ಅವರ ಸಹಾಯದಿಂದ ಇಂತಹ ವಿಜೃಂಭಣೆಯ ಕಾರ್ಯಕ್ರಮಕ್ಕೆ ಭಾರೀ ಸಿದ್ದತೆ ನಡೆಯುತ್ತಿವೆ ಎಂದರು.