ಫಿನ್ಲ್ಯಾಂಡ್, ಜು 23 (DaijiworldNews/PY): ಕೊರೊನಾ ವೈರಸ್ ಪತ್ತೆಗೆ ಟೆಸ್ಟ್ ಕಿಟ್ಗಳ ಫಲಿತಾಂಶಕ್ಕಿಂತ ಸ್ನಿಫರ್ ನಾಯಿಗಳು ಉತ್ತಮವಾದ ಫಲಿತಾಂಶವನ್ನು ನೀಡುತ್ತವೆ ಎಂದು ಫಿನ್ಯಾಂಡ್ ಸಂಶೋಧಕರು ಹೇಳಿದ್ದಾರೆ.
ಕೊರೊನಾ ಸೋಂಕು ಪತ್ತೆ ಮಾಡುವ ಪಿಸಿಆರ್ ಟೆಸ್ಟ್ ಅಥವಾ ಯಾವುದೇ ಟೆಸ್ಟ್ಗಳಿಗಿಂತ ಉತ್ತಮವಾದ ಫಲಿತಾಂಶವನ್ನು ಸ್ನಿಫರ್ ನಾಯಿಗಳು ನೀಡಬಲ್ಲವು. ಏಕೆಂದರೆ ಸ್ನಿಫರ್ ನಾಯಿಗಳ ಮೂಗು ತುಂಬಾ ಸೂಕ್ಷ್ಮವಾಗಿದ್ದು, ಸೋಂಉ ಪೀಡಿತರನ್ನು ಈ ನಾಯಿಗಳು ಪತ್ತೆ ಮಾಡಿದ್ದಲ್ಲಿ ಖಚಿತವಾಗಿ ನಂಬಲು ಸಾಧ್ಯ ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕು ಪತ್ತೆ ಮಾಡಲು ರಕ್ಷ ಪರೀಕ್ಷೆ ಹಾಗೂ ಗಂಟಲ ದ್ರವದ ಮಾದರಿ ಪರೀಕ್ಷೆಯನ್ನು ಪಿಸಿಆರ್ ಮೂಲಕ ಮಾಡಿ ಖಚಿತಪಡಿಸಲಾಗುತ್ತದೆ. ಆದರೆ, ಫಿನ್ಲ್ಯಾಂಡ್ನಲ್ಲಿ ಹಾಗಲ್ಲ. ಇಲ್ಲಿನ ಹೆಲ್ಸೆನ್ಕಿ ಯೂನಿವರ್ಸಿಟಿಯ ಸಂಶೋಧಕರ ಅಧ್ಯಯನದ ಪ್ರಕಾರ, ತರಬೇತಿ ಪಡೆದಿರುವಂತ ಸ್ನಿಫರ್ ನಾಯಿಗಳಿದ್ದರೆ, ಆ ನಾಯಿಗಳು ಕೊರೊನಾ ಸೋಂಕಿತರ ಮೂತ್ರದ ವಾಸನೆಯನ್ನು ಗ್ರಹಿಸಿ ಪಾಸಿಟಿವ್ ಅಥವಾ ನಗೆಟಿವ್ ಎಂದು ಪತ್ತೆ ಮಾಡಬಲ್ಲವು ಎಂದು ಸಂಶೋಧಕರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸಂಶೋಧಕ ಅನ್ನಾ ಹೆಲ್ಮ್ ಜಾಕ್ಮನ್ ಅವರು, ಕ್ಯಾನ್ಸರ್ ಸೇರಿದಂತೆ ಕೆಲವು ರೋಗಗಳನ್ನು ನಾಯಿಗಳು ಪತ್ತೆ ಮಾಡುವ ವಿಚಾರ ನಮಗೆ ಈಗಾಗಲೇ ತಿಳಿದಿದೆ. ಇದೇ ರೀತಿಯಾಗಿ ಕೊರೊನಾ ಸೋಂಕಿತರನ್ನು ಕೂಡಾ ಪತ್ತೆ ಮಾಡಿದರೆ ನೆರವಾಗುತ್ತದೆ ಎಂದುಕೊಂಡೆವು. ಅಲ್ಲದೇ, ಕೊರೊನಾ ಸೋಂಕಿತರನ್ನು ಪತ್ತೆ ಮಾಡುವ ಬಗ್ಗೆ ನಾವಂದುಕೊಂಡ ಕಾರ್ಯ ಸಫಲವಾಗಿದೆ ಎಂದಿದ್ದಾರೆ.
ಇದಕ್ಕೆ ಉದಾಹರಣೆ ನೀಡಿರುವ ಅವರು, ಕೊರೊನಾ ಪೀಡಿತರ ಹಾಗೂ ಪೀಡಿತರಲ್ಲದ ವ್ಯಕ್ತಿಗಳ ಸ್ಯಾಂಪಲ್ಗಳ ವಾಸನೆಯನ್ನು ಗ್ರಹಿಸಲು ನಾಯಿಗಳ ಮುಂದೆ ಇರಿಸಲಾಗಿತ್ತು. ಸ್ಪ್ಯಾನಿಶ್ ಗ್ರೇಹೌಂಡ್ ನಾಯಿ ಕೊರೊನಾ ಪಾಸಿಟಿವ್ ಸ್ಯಾಂಪಲ್ ಅನ್ನು ಪತ್ತೆ ಮಾಡಿದೆ. ಈ ಕಾರಣದಿಂದ ನಾಯಿಗಳು ಕೊರೊನಾ ಸೋಂಕಿತರನ್ನು ಪತ್ತೆಹಚ್ಚುತ್ತವೆ ಎನ್ನುವುದನ್ನು ನಂಬಬಹುದಾಗಿದೆ ಎಂದು ತಿಳಿಸಿದ್ದಾರೆ.