ವಾಷಿಂಗ್ಟನ್, ಜು 23 (DaijiworldNews/PY): ಭಾರತವು ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿದೆ ಎಂದು ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಂಜೀತ್ ಸಿಂಗ್ ಸಂಧು ಹೇಳಿದ್ದಾರೆ.
ಭಾರತ- ಅಮೆರಿಕ ಬ್ಯುಸಿನೆಸ್ ಕೌನ್ಸಿಲ್ ಆಯೋಜಿಸಿದ್ದ ‘ಇಂಡಿಯಾಸ್ ಐಡಿಯಾ ಸಮ್ಮಿಟ್’ನಲ್ಲಿ ಮಾತನಾಡಿದ ಅವರು, ಭಾರತವು ಅಮೆರಿಕ ಸೇರಿದಂತೆ 100ಕ್ಕೂ ಅಧಿಕ ದೇಶಗಳಿಗೆ ಕೊರೊನಾಕ್ಕೆ ಸಂಬಂಧಿಸಿದ ಔಷಧಿ ಹಾಗೂ ವೈದ್ಯಕೀಯ ಉಪಕರಣಗಳ ಪೂರೈಕೆ ಮಾಡಿದೆ ಎಂದಿದ್ದಾರೆ.
ಪ್ರತಿ ಬಿಕ್ಕಟ್ಟು ಹೊಸ ಅವಕಾಶವನ್ನು ಒದಗಿಸುತ್ತದೆ. ಆರೋಗ್ಯ, ಲಸಿಕೆ, ಅಭಿವೃದ್ದಿ, ವಿಜ್ಞಾನ-ತಂತ್ರಜ್ಞನಾ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಅಮೆರಿಕ ಹಾಗೂ ಭಾರತ ಸಹಯೋಗ ಹೊಂದಿದೆ ಎಂದು ಹೇಳಿದ್ದಾರೆ.
ಕೊರೊನಾ ಹಾಗೂ ನಂತರದ ಜಗತ್ತಿನಲ್ಲಿ ತಂತ್ರಜ್ಞನಾವು ಪ್ರಮುಖ ಪಾತ್ರ ವಹಿಸುತ್ತದ ಎಂದು ನಾನು ದೃಢವಾಗಿ ನಂಬುತ್ತೇನೆ. ಇದು ಈಗಾಗಲೇ ಕೆಲಸ, ಶಿಕ್ಷಣ, ವ್ಯವಹಾರ, ಆರೋಗ್ಯ ಸೇರಿದಂತೆ ರಾಜತಾಂತ್ರಿಕತೆಗೆ ಹೊಸದಾದ ಪರಿಹಾರವನ್ನು ಒದಗಿಸುತ್ತಿದೆ. ಅಲ್ಲದೇ, ಮುಕ್ತ ವಿಚಾರಗಳ ಮಿನಿಮಯ ಹಾಗೂ ಮಾಹಿತಿಯು ನಮ್ಮ ಪಾಲುದಾರಿಕೆಯ ದೊಡ್ಡ ಸಾಮಾರ್ಥ್ಯವಾಗಿದೆ ಎಂದು ತಿಳಿಸಿದ್ದಾರೆ.