ಇಸ್ಲಾಮಾಬಾದ್, ಜು.19 (DaijiworldNews/MB) : ಕಟ್ಟಡ ನಿರ್ಮಾಣಕ್ಕೆ ಗುಂಡಿ ತೆಗೆಯುವ ಸಂದರ್ಭದಲ್ಲಿ ದೊರೆತ ಪುರಾತನ ಬುದ್ಧ ಪ್ರತಿಮೆಯನ್ನು ಸ್ಥಳೀಯರು ನಾಶಪಡಿಸಿದ ಘಟನೆ ಪಾಕಿಸ್ಥಾನದ ಖೈಬರ್ ಪ್ರಾಂತ್ಯದ ಮರ್ದನ್ ಜಿಲ್ಲೆಯ ತಖ್ತ್ ಬಾಹಿ ಎಂಬ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕಟ್ಟಡ ನಿರ್ಮಾಣಕ್ಕೆ ಪಾಯ ತೋಡುವ ಸಂದರ್ಭದಲ್ಲಿ ಈ ವಿಗ್ರಹ ಪತ್ತೆಯಾಗಿದ್ದು ಇದು ಸುಮಾರು 1800 ವರ್ಷಗಳಷ್ಟು ಹಳೆಯದ್ದು, ಗಾಂಧಾರ ನಾಗರಿಕತೆಗೆ ಸೇರಿದ ವಿಗ್ರಹ ಎನ್ನಲಾಗಿದೆ.
ಇನ್ನು ಈ ವಿಗ್ರಹವನ್ನು ಸ್ಥಳೀಯ ಮೌಲ್ವಿಯ ಸೂಚನೆಯ ಮೇರೆಗೆ ಸ್ಥಳೀಯರು ಈ ವಿಗ್ರಹವನ್ನು ನಾಶ ಮಾಡಿದ್ದಾರೆ ಎಂದು ಹೇಳಲಾಗಿದ್ದು ಈ ಬಗ್ಗೆ ಸ್ಥಳೀಯ ಪುರಾತತ್ವ ಇಲಾಖೆ ನಿರ್ದೇಶಕ ಅಬ್ದುಲ್ ಸಮದ್, ವಿಗ್ರಹ ನಾಶ ಮಾಡಿದ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.