ನ್ಯೂಯಾರ್ಕ್, ಜು 17 (DaijiworldNews/PY): ಟಿಕ್ಟಾಕ್ ಸಂಸ್ಥೆ ಚೀನಾದೊಂದಿಗಿನ ಸಂಪರ್ಕದಿಂದ ಕಡಿತಗೊಳ್ಳಲಿದ್ದು, ಶೇ.100ರಷ್ಟು ಅಮೆರಿಕ ಕಂಪೆನಿಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೋ ಹೇಳಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕ್ ಟಾಕ್ ಚೀನಾ ನಡೆಸುತ್ತಿರುವ ಕಂಪನಿಯಿಂದ ಹೊರಬರಲು ಮತ್ತು ಸ್ವತಂತ್ರ ಅಮೆರಿಕ ಕಂಪನಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ನಾನು ಭಾವಿಸುತ್ತೇನೆ ಎಂಬುದಾಗಿ ತಿಳಿಸಿದ್ದಾರೆ.
ಇದನ್ನು ನಿಷೇಧಿಸಬೇಕೆ ಎಂಬ ಬಗ್ಗೆಅಮೆರಿಕ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಸೂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಟಿಕ್ಟಾಕ್ ಅನ್ನು ನಿಷೇಧಿಸುವುದಕ್ಕಿಂತ ಬೈಟ್ಡ್ಯಾನ್ಸ್ ಟೆಕ್ನಾಲಜಿ ಕಂಪೆಯಿಂದ ಹೊರತರುವುವುದು ಉತ್ತಮವಾಗಿದೆ. ಟಿಕ್ಟಾಕ್ನ ಸೇವೆಗಳು ಅಮೆರಿಕದಲ್ಲಿಯೇ ಇರುತ್ತವೆ ಮತ್ತು ಇದು ಶೇ.100ರಷ್ಟು ಅಮೆರಿಕ ಕಂಪನಿಯಾಗಲಿದೆ ಎಂದು ತಿಳಿಸಿದ್ದಾರೆ.
ಚೀನಾದ ಸಂಪರ್ಕವಿಲ್ಲದೇ ಟಿಕ್ಟಾಕ್ ಅಮೆರಿಕದ ಕಂಪನಿಯಾಗಿದ್ದರೆ, ದೇಶದಲ್ಲಿ ಹೆಚ್ಚು ಜನಪ್ರಿಯವಾಗಿರುವ ಕಿರು ವಿಡಿಯೋ ಅಪ್ಲಿಕೇಶನ್ನ ನಿಷೇಧವನ್ನು ಭಾರತ ಮರುಪರಿಶೀಲಿಸಬೇಕಾಗಬಹುದು ಎಂದಿದ್ದಾರೆ.
ಭಾರತವು ಜೂನ್ 29 ರಂದು ಟಿಕ್ಟಾಕ್ ಸೇರಿದಂತೆ ಚೀನಾದ 58 ಅಪ್ಲಿಕೇಶನ್ಗಳನ್ನು ನಿಷೇಧಿಸಿದೆ.