ವಿಶ್ವಸಂಸ್ಥೆ, ಜು 17 (Daijiworld News/MSP): ಪಾಕಿಸ್ತಾನದ "ತೆಹ್ರಿಕ್ ಏ ತಾಲೀಬಾನ್ ಪಾಕಿಸ್ತಾನ್(ಟಿಟಿಪಿ) " ಉಗ್ರ ಸಂಘಟನೆಯ ಮುಖಂಡ ನೂರ್ ವಾಲಿ ಮೆಹ್ಸೂದ್ ನನ್ನು ವಿಶ್ವಸಂಸ್ಥೆ ಕಪ್ಪುಪಟ್ಟಿಗೆ ಸೇರಿಸಿ ಆತನನ್ನು "ಜಾಗತಿಕ ಉಗ್ರ " ಎಂದು ಘೋಷಿಸಿದೆ.
ಮಾತ್ರವಲ್ಲದೆ ಪಾಕಿಸ್ತಾನಿ ಪ್ರಜೆಯಾದ ಮೆಹ್ಸೂದ್ ಗೆ ಪ್ರಯಾಣ ನಿರ್ಬಂಧ, ಆಸ್ತಿ ಮುಟ್ಟುಗೋಲು ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಕ್ರಮ ತೆಗೆದುಕೊಳ್ಳಲು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸೂಚಿಸಿದೆ. ಮೆಹಸೂದ್ ನಾಯಕತ್ವದಲ್ಲಿ ಪಾಕಿಸ್ತಾನದ ಉದ್ದಗಲಕ್ಕೂ ಅನೇಕ ಉಗ್ರಕೃತ್ಯಗಳು ನಡೆದಿವೆ.
ನೂರ್ ವಾಲಿ ಮೆಹ್ಸೂದ್ ನಿಷೇಧಿತ ಉಗ್ರ ಸಂಘಟನೆ ಅಲ್ಕೈದಾ ಜತೆಗೆ್ ನಿಕಟ ಸಂಪರ್ಕ ಹೊಂದಿದ್ದ ಅದರ ಪರವಾಗಿ ಕೆಲಸ ಮಾಡುತ್ತಿದ್ದ. ಮಾತ್ರವಲ್ಲದೆ ಭಯೋತ್ಪಾದಕ ಚಟುವಟಿಕೆಗೆ ಫಂಡಿಂಗ್ , ಟೆರರ್ ಪ್ಲಾನಿಂಗ್, ಅವುಗಳನ್ನು ಕಾರ್ಯರೂಪಕ್ಕೆ ತರುವುದು ಮತ್ತು ಅಂತಹ ಕೃತ್ಯಗಳಿಗೆ ಪ್ರಚೋದನೆ ನೀಡುವುದು ಮಾಡುತ್ತಿದ್ದ. ಈ ಹಿನ್ನಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ 1267 ಐಎಸ್ಐಎಲ್ ಮತ್ತು ಅಲ್ಕೈದಾ ನಿರ್ಬಂಧ ಕಮಿಟಿ ಮೆಹಸೂದ್(42) ಹೆಸರನ್ನು ಐಎಸ್ಐಎಲ್(ಡಾಯಿಷ್) ಮತ್ತು ಅಲ್ಕೈದಾ ನಿರ್ಬಂಧಪಟ್ಟಿಗೆ ಗುರುವಾರ ಸೇರಿಸಿದೆ.