ವಾಷಿಂಗ್ಟನ್, ಜು 15 (DaijiworldNews/PY): ಅಮೆರಿಕದಲ್ಲಿ ಕೊರೊನಾಗೆ ಅಭಿವೃದ್ದಿಪಡಿಸಿದ ಲಸಿಕೆಯು ವಿಜ್ಞಾನಿಗಳು ನಿರೀಕ್ಷೆ ಮಾಡಿದ ರೀತಿಯಲ್ಲಿಯೇ ಸೋಂಕಿತರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿದ್ದು, ಅಂತಿಮ ಹಂತದ ಪರೀಕ್ಷೆಯನ್ನು ಪ್ರಾರಂಭಿಸಲು ತಯಾರು ಮಾಡಲಾಗುತ್ತದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅಮೆರಿಕ ಸರ್ಕಾರದ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ಅವರು, ಈ ವಿಚಾರದ ಬಗ್ಗೆ ಹೇಗೆ ವಿಶ್ಲೇಷಿಸಿದರೂ ಇದು ಒಳ್ಳೆಯ ಸುದ್ದಿ ಎಂದು ತಿಳಿಸಿದ್ದಾರೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಆಂಡ್ ಮಾಡರ್ನಾ ಇಂಕ್ನಲ್ಲಿ ಫೌಸಿಯ ಸಹೋದ್ಯೋಗಿಗಳು ಅಭಿವೃದ್ಧಿಪಡಿಸಿದ ಪ್ರಾಯೋಗಿಕ ಲಸಿಕೆ ಜುಲೈ 27 ರ ಸುಮಾರಿಗೆ ಕಾರ್ಯವನ್ನು ಪ್ರಾರಂಭಿಸುತ್ತದೆ. ಕರೋನವೈರಸ್ನಿಂದ ರಕ್ಷಿಸಲು ಇದು ನಿಜವಾಗಿಯೂ ಪ್ರಬಲವಾಗಿದೆಯೇ ಎಂದು ಸಾಬೀತುಪಡಿಸಲು 30,000 ವ್ಯಕ್ತಿಗಳ ಮೇಲೆ ಪ್ರಯೋಗ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಂಶೋಧಕರು ಮಾರ್ಚ್ನಲ್ಲಿ 45 ಸ್ವಯಂಸೇವಕರ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಿದ್ದರು. ನಾವು ವರದಿಗಾಗಿ ನಿರೀಕ್ಷೆ ಮಾಡುತ್ತಿದ್ದೆವು. ಆದರೆ, ವರದಿಯಲ್ಲಿ ಈ ಲಸಿಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಯಿತು.
ಸಂಶೋಧನಾ ತಂಡವು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ ವರದಿ ಮಾಡಿದ್ದು, ಸ್ವಯಂ ಸೇವಕರಲ್ಲಿ ರಕ್ತದಲ್ಲಿನ ಸೋಂಕನ್ನು ತಟಸ್ಥಗೊಳಿಸುವ ಪ್ರತಿಕಾಯಗಳು ಅಭಿವೃದ್ದಿಯಾಗಿರುವುದು ತಿಳಿದುಬಂದಿದೆ ಎಂದು ತಿಳಿಸಿದೆ.
ಒಂದು ತಿಂಗಳಿನ ಅಂತರದಲ್ಲಿ ಎರಡು ಡೋಸ್ಗಳು ಬೇಕಾಗುತ್ತವೆ. ಯಾವುದೇ ಗಂಭೀರ ಅಡ್ಡಪರಿಣಾಮಗಳಿಲ್ಲ. ಆದರೆ, ವರ್ಷಾಂತ್ಯದಲ್ಲಿ ಉತ್ತಮವಾದ ಫಲಿತಾಂಶ ಪಡೆಯಬೇಕೆಂದು ಅಮೆರಿಕ ಸರ್ಕಾರ ಆಶಿಸುತ್ತಿದೆ.
ಲಸಿಕೆಯನ್ನು ಸ್ವೀಕರಿಸಿದ ಅರ್ಧಕ್ಕಿಂತಲೂ ಹೆಚ್ಚು ಮಂದಿಯಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದೆ. ಇನ್ನು ಕೆಲವರಲ್ಲಿ ತಲೆನೋವು, ಶೀತ, ಜ್ವರ ಹಾಗೂ ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ನೋವು ಕಾಣಿಸಿಕೊಂಡಿದೆ. ಇದೆಲ್ಲಾ ಒಂದು ದಿನದಲ್ಲಿ ವಾಸಿಯಾಗಿವೆ. ಕೊರೊನಾ ಸೋಂಕಿತರಲ್ಲಿಯೂ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದಿದ್ದಾರೆ.