ವಾಷಿಂಗ್ಟನ್, ಜು 14 (DaijiworldNews/PY): ಭಾರತ, ಚೀನಾ, ಬ್ರೆಜಿಲ್ ದೇಶಗಳಿಗಿಂತಲೂ ಅಮೆರಿಕದಲ್ಲಿ ಹೆಚ್ಚು ಕೊರೊನಾ ಪರೀಕ್ಷೆ ಮಾಡಲಾಗುತ್ತದೆ. ವಿಶ್ವದಲ್ಲೇ ಕೊರೊನಾದ ಅತೀ ಹೆಚ್ಚು ಪರೀಕ್ಷೆ ಮಾಡಿರುವುದು ಅಮೆರಿಕದಲ್ಲಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಬ್ರೆಜಿಲ್ನಲ್ಲಿ ಅಮೆರಿಕದ ರೀತಿಯಲ್ಲಿ ಕೊರೊನಾ ಪರೀಕ್ಷೆ ಮಾಡುತ್ತಿಲ್ಲ. ಈವರೆಗೆ ಅಮೆರಿಕದಲ್ಲಿ ಸುಮಾರು 4.5 ಕೋಟಿ ಜನರ ಕೊರೊನಾ ಪರೀಕ್ಷೆ ಮಾಡಲಾಗಿದೆ ಎಂದರು.
ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಅಮೆರಿಕದಲ್ಲಿ ಹೆಚ್ಚು ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ಈ ಕಾರಣದಿಂದ ಅಮೆರಿಕದಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ. ಕೆಲವು ದೇಶಗಳಲ್ಲಿ ಆಸ್ಪತ್ರೆಗೆ ತೆರಳಿದ್ದ ಸಂದರ್ಭ ಮಾತ್ರವೇ ಪರೀಕ್ಷೆ ಮಾಡುವ ಕಾರಣ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.
ನಾವು ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ಮಾಡಿದ್ದು, ಲಸಿಕೆ ಅಭಿವೃದ್ದಿ ಕಾರ್ಯ ಪ್ರಗತಿಯಲ್ಲಿದೆ. ಮೃತರ ಸಂಖಯೆ ಅಮೆರಿಕದಲ್ಲಿ ಕಡಿಮೆ ಇದೆ ಎಂದು ಹೇಳಿದರು.
ಕೊರೊನಾ ವೈರಸ್ ಮೊದಲು ಚೀನಾದ ವುಹಾನ್ನಲ್ಲಿ ಪ್ರಾರಂಭವಾಗಿದ್ದು, ವಿಶ್ವಕ್ಕೆ ಚೀನಾ ಮಾಡಿರುವ ಕೃತ್ಯವನ್ನು ಯಾರೂ ಮರೆಯಬಾರದು ಎಂದರು.