ಲಾಹೋರ್, ಜು 10 (DaijiworldNews/PY): ಪಿಐಎಯ ವಿಶೇಷ ಪರವಾನಗಿಯನ್ನು ಅಮೆರಿಕ ಸಾರಿಗೆ ಇಲಾಖೆಯು ಗುರುವಾರ ಅಮಾನತುಗೊಳಿಸಿದೆ.
ಪಿಐಎ ತನ್ನ ವಿಮಾನಗಳನ್ನು ಅಮೆರಿಕಕ್ಕೆ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಪಿಐಎ ನಿರ್ವಹಿಸುವ ಎಲ್ಲಾ ರೀತಿಯ ವಿಮಾನಗಳಿಗೆ ನಿಷೇಧ ಹೇರಲಾಗಿದೆ ಎಂದು ಅಮೆರಿಕ ಪ್ರಾಧಿಕಾರ ತಿಳಿಸಿದ್ದಾರೆ.
ಈ ಬಗ್ಗೆ ಪಿಐಎ ವಕ್ತಾರರು ನಿಷೇಧವನ್ನು ದೃಢಡಿಸಿದ್ದು, ಅಮೆರಿಕದ ಸಮಸ್ಯೆಯನ್ನು ನಾವು ಪರಿಹರಿಸುತ್ತೇವೆ. ವಿಮಾನಯಾನದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬಗ್ಗೆ ಸರಿಪಡಿಸುವ ಕ್ರಮಗಳ ಮೂಲಕ ಪೈಲಟ್ಗಳ ಪರವಾನಗಿಗಳ ವಿಷಯವನ್ನು ಸರಿಪಡಿಸಲಾಗುವುದು ಎಂದು ಹೇಳಿದರು.
ಇಎಎಸ್ಎ ರಾಷ್ಟ್ರೀಯ ಪರವಾನಗಿಯನ್ನು ಆರು ತಿಂಗಳವರೆಗೆ ಅಮಾನತುಗೊಳಿಸಿದ ಕೆಲವೇ ದಿನಗಳ ಬಳಿಕ, ಯುಕೆ ತನ್ನ ಮೂರು ವಿಮಾನ ನಿಲ್ದಾಣಗಳಿಂದ ಪಿಐಎ ವಿಮಾನಗಳನ್ನು ನಿಷೇಧಿಸಿದ್ದು, ವಿಯೆಟ್ನಾಂ ದೇಶದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಪಾಕಿಸ್ತಾನಿ ಪೈಲಟ್ಗಳನ್ನು ವಾಪಾಸ್ಸಾಗುವಂತೆ ತಿಳಿಸಿತ್ತು.
ಅಂತೆಯೇ, ಮಲೇಷ್ಯಾದ ವಾಯುಯಾನ ನಿಯಂತ್ರಣ ಪ್ರಾಧಿಕಾರವು ಪಾಕಿಸ್ತಾನದ ಪರವಾನಗಿಗಳನ್ನು ಹೊಂದಿರುವ ಮತ್ತು ಅದರ ದೇಶೀಯ ವಿಮಾನಯಾನ ಸಂಸ್ಥೆಗಳಿಂದ ನೇಮಕಗೊಂಡ ಪೈಲಟ್ಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವುದಾಗಿ ಘೋಷಿಸಿತು. ಏತನ್ಮಧ್ಯೆ, ಯುಎಇ ತನ್ನ ವಿಮಾನ ನಿಲ್ದಾಣಗಳಲ್ಲಿ ಕೆಲಸ ಮಾಡುವ ಪಾಕಿಸ್ತಾನಿ ಸಿಬ್ಬಂದಿಗೆ ನೀಡಲಾದ ಸಿಎಎ ಪರವಾನಗಿಗಳನ್ನು ಪರಿಶೀಲಿಸಲು ಕೋರಿದೆ.
ಕಳೆದ ತಿಂಗಳು ಸರ್ಕಾರದ ಪರಿಶೀಲನೆ ನಡೆಸಿದ ನಂತರ ದೇಶದ 860 ಸಕ್ರಿಯ ಪೈಲಟ್ಗಳಲ್ಲಿ 262 ಮಂದಿ ನಕಲಿ ಪರವಾನಗಿಗಳನ್ನು ಹೊಂದಿದ್ದಾರೆ ಹಾಗೂ ಪರೀಕ್ಷೆಗಳಲ್ಲಿ ಮೋಸ ಮಾಡಿದ್ದಾರೆ ಎಂದು ಪತ್ತೆಮಾಡಿದ್ದು, ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಪಿಐಎ ಮೂಲದವರು, ಅದರ ನಂತರ ವಿಮಾನಯಾನವು ತನ್ನ 434 ಪೈಲಟ್ಗಳಲ್ಲಿ 141 ಮಂದಿಯನ್ನು ತಕ್ಷಣವೇ ಹಿಂದಕ್ಕೆ ಕರೆತರುವುದಾಗಿ ಹೇಳಿದೆ.
ಕೊರೊನಾ ವೈರಸ್ ಪರಿಣಾಮವಾಗಿ ವಿಮಾನಯಾನವು ಸೀಮಿತ ಅಂತರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸಿದ್ದು, ಕಳೆದ ತಿಂಗಳು ದೇಶೀಯ ಕಾರ್ಯಾಚರಣೆಯನ್ನು ಪುನರಾರಂಭಿಸಿದ ನಂತರ ಪೈಲಟ್ನಿಂದ 98 ಜನರು ಸಾವನ್ನಪ್ಪಿದರು.