ವಾಷಿಂಗ್ಟನ್, ನ.07 (DaijiworldNews/AA): ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ಗುರುತಿಸಿಕೊಂಡಿರುವ ಗ್ಯಾಂಗ್ಸ್ಟರ್ ಹ್ಯಾರಿ ಬಾಕ್ಸರ್ ನನ್ನು ಅಮೆರಿಕದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಅಮೆರಿಕದಲ್ಲೇ ಇದ್ದುಕೊಂಡು ಗ್ಯಾಂಗ್ನ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದ ಎನ್ನಲಾದ ಹ್ಯಾರಿ ಬಾಕ್ಸರ್ ವಿರುದ್ಧ ಕೊಲೆ ಹಾಗೂ ಬೆದರಿಕೆ ಮೂಲಕ ಸುಲಿಗೆಗೆ ಸಂಬಂಧಿಸಿದ ಹಲವು ಪ್ರಕರಣಗಳು ದಾಖಲಾಗಿವೆ.
ಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈ ನಿವಾಸದ ಹೊರಭಾಗದಲ್ಲಿ ನಡೆದ ಗುಂಡಿನ ದಾಳಿಯ ಹೊಣೆಯನ್ನು ಹ್ಯಾರಿ ಬಾಕ್ಸರ್ ಹೊತ್ತುಕೊಂಡಿದ್ದ ಎನ್ನಲಾಗಿದೆ. ಈ ದಾಳಿ ಬಳಿಕ ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಹಾಗೂ ಆಡಿಯೊ ಸಂದೇಶಗಳ ಮೂಲಕ ಬಾಲಿವುಡ್ನ ಹಲವು ಗಣ್ಯರಿಗೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.
ಈ ದಾಳಿಯ ಬೆನ್ನಲ್ಲೇ ಹ್ಯಾರಿ ಬಾಕ್ಸರ್ ಮತ್ತು ಶುಭಂ ಲೋಂಕರ್ ಹೆಸರುಗಳನ್ನು ಉಲ್ಲೇಖಿಸಿ ದಾಳಿಯ ಹೊಣೆಯನ್ನು ಅರ್ಜು ಬಿಷ್ಣೋಯ್ ಎಂಬ ವ್ಯಕ್ತಿಯೊಬ್ಬ ಹೊಣೆ ಹೊತ್ತಿದ್ದ. ಈ ಆಡಿಯೊ ಸಂದೇಶ ಕುರಿತು ಪೊಲೀಸರು ಪರಿಶೀಲಿಸುತ್ತಿದ್ದು, ಫೆಬ್ರವರಿಯ ಗುಂಡಿನ ದಾಳಿಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಪಾತ್ರದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಹ್ಯಾರಿ ಬಾಕ್ಸರ್ ವಶಕ್ಕೆ ಪಡೆಯುವ ಕೆಲವೇ ದಿನಗಳ ಮೊದಲು, ಗ್ಯಾಂಗ್ಸ್ಟರ್ಗಳಾದ ಹಿಮಾಂಶು ಭಾವು ಮತ್ತು ನೀರಜ್ ಫರೀದ್ಪುರಿಯಾ ಅವರನ್ನೂ ಅಮೆರಿಕದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.