ವಾಷಿಂಗ್ಟನ್, ನ.03 (DaijiworldNews/AK): ಅಮೆರಿಕದಲ್ಲಿ ಇಂದು ಮಧ್ಯಂತರ ಚುನಾವಣೆ ನಡೆಯುತ್ತಿದೆ. ಭಾರತದ ಸಮಯದ ಪ್ರಕಾರ ಇಂದು ಸಂಜೆಗೆ ಅಮೆರಿಕದ ಹಲವು ರಾಜ್ಯಗಳಲ್ಲಿ ಮತದಾನ ಆರಂಭವಾಗಿದೆ.

ಈ ಚುನಾವಣೆಯ ಫಲಿತಾಂಶ ಅಮೆರಿಕದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಬಹುದು. ಮುಖ್ಯವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಕಾಂಗ್ರೆಸ್ನ ಎರಡೂ ಸದನಗಳಲ್ಲಿ ಹೊಂದಿರುವ ಬಹುಮತವನ್ನು ಉಳಿಸಿಕೊಳ್ಳುತ್ತದೆಯೇ ಅಥವಾ ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಕ್ಷ ಅಧಿಕಾರದ ಸಮತೋಲನವನ್ನು ಬದಲಿಸುತ್ತದೆಯೇ ಎಂಬ ಕುತೂಹಲ ಮೂಡಿದೆ.
ಈ ಚುನಾವಣೆಯಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ. ಬದಲಿಗೆ ಅಮೆರಿಕದ ಸಂಸತ್ತಿನ ಎರಡು ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ನ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಇದರ ಜೊತೆಗೆ ಈ ಬಾರಿ 36 ರಾಜ್ಯಗಳಲ್ಲಿ ಗವರ್ನರ್ಗಳ ಆಯ್ಕೆಗೂ ಮತದಾನ ನಡೆಯುತ್ತಿದೆ. ಹೊಸದಾಗಿ ಆಯ್ಕೆಯಾದ ಸಂಸದರು 2027ರ ಜನವರಿ 3ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.