ಜೆದ್ದಾ, ಅ.03 (DaijiworldNews/TA): ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಲಯಾಳಿ ನರ್ಸ್ಗಳು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ತೈಫ್-ರಾನಿಯಾ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಮೃತ ಕೇರಳದ ನರ್ಸ್ಗಳನ್ನು ಕೊಟ್ಟಾಯಂನ ಅಯರ್ಕುನ್ನಮ್ ಮೂಲದ ಜೈಸಿಮೋಲ್ ಮ್ಯಾಥ್ಯೂ (36) ಹಾಗೂ ಕುರುಮುಳ್ಳೂರಿನ ಅಣಚ್ಕುನ್ನೆಲ್ ಮೂಲದ ಜೋಬಿನಾ ಜಾನಿ (26) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ತಮಿಳುನಾಡು ಮೂಲದ ವಿಜಯಲಕ್ಷ್ಮಿ ಮತ್ತು ಹೆಪ್ಸಿಬಾ ಎಂಬ ಇಬ್ಬರು ನರ್ಸ್ಗಳೂ ಮೃತಪಟ್ಟಿದ್ದಾರೆ. ಇವರಿಬ್ಬರೂ ಸೌದಿ ಅರೇಬಿಯಾದ ಸರ್ಕಾರಿ ಔಷಧಾಲಯದಲ್ಲಿ ನರ್ಸ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರೊಂದಿಗೆ ಕಾರು ಚಲಾಯಿಸುತ್ತಿದ್ದ ಸೌದಿ ಪ್ರಜೆಯೂ ಸಾವನ್ನಪ್ಪಿದ್ದಾರೆ. ರಜೆ ಹಿನ್ನೆಲೆಯಲ್ಲಿ ನರ್ಸ್ಗಳು ರಾನಿಯಾ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದ ನಿಖರ ಕಾರಣದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.