ವಾಷಿಂಗ್ಟನ್, ಅ.02 (DaijiworldNews/AA): ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಾದ ಘಟನೆಗೂ ಇರಾನ್ಗೂ ಸಂಬಂಧವಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

'ಫ್ಲೈದುಬೈ ದಾಳಿಕೋರ ಮತ್ತು ಇರಾನ್ ನಡುವೆ ಇರಬಹುದಾದ ಸಂಪರ್ಕದ ಕುರಿತು ಯಾರಾದರೂ ತಮಗೆ ಮಾಹಿತಿ ನೀಡಿದ್ದಾರೆಯೇ?' ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, "ನಮ್ಮ ತಂಡವು ಈ ವಿಷಯವನ್ನು ಪರಿಶೀಲಿಸುತ್ತಿದೆ. ಈ ಸಂಬಂಧ ತನಿಖೆ ಇನ್ನೂ ನಡೆಯುತ್ತಿದ್ದರೂ, ತಮಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಪ್ರತಿಕ್ರಿಯಿಸಿದ್ದೇನೆ" ಎಂದು ಹೇಳಿದ್ದಾರೆ.
"ನಾವು ಸದ್ಯಕ್ಕೆ ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ಈ ವಿಷಯದಲ್ಲಿ ನಾವು ಸಂಪೂರ್ಣ ಪಾರದರ್ಶಕವಾಗಿರುತ್ತೇವೆ. ನನಗೆ ಕೇಳಿಬರುತ್ತಿರುವ ಮಾಹಿತಿಯ ಆಧಾರದ ಮೇಲೆ ಹೇಳುವುದಾದರೆ, ಅದಕ್ಕೆ ಉತ್ತರ 'ಹೌದು' ಎಂದೇ ಆಗಿರುತ್ತದೆ. ಆದರೆ, ನಾವು ಈಗ ಅದರ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ಆಕ್ರಮಣಕ್ಕೆ ಇರಾನ್ ಹೊಣೆಗಾರನಾಗಿದ್ದರೆ ಅವರಿಗೆ ತೀವ್ರವಾದ ಹೊಡೆತ ಬೀಳಲಿದೆ, ಚಿಂತಿಸಬೇಡಿ" ಎಂದರು.