ದುಬೈ , ಸೆ.25 (DaijiworldNews/AK): ಯಕ್ಷ ಮಿತ್ರರು ದುಬಾಯಿ ಯುಎಇ ಇವರ 23ನೇ ವರ್ಷದ "ಯಕ್ಷ ಸಂಭ್ರಮ - 2026" ಸೆಪ್ಟೆಂಬರ್ 27ರಂದು ನಗರದ ಜುಮೈರಾದ ಎಮಿರೇಟ್ಸ್ ಥಿಯೇಟರ್ ನಲ್ಲಿ ಪ್ರದರ್ಶನಗೊಳ್ಳಲಿದೆ.

ಮಧ್ಯಾಹ್ನ 1.30ಕ್ಕೆ ಯಕ್ಷ ಮಿತ್ರರು ದುಬೈ ತಂಡದ ರೂವಾರಿ ಚಿದಾನಂದ ಪೂಜಾರಿ ನೇತೃತ್ವದಲ್ಲಿ ಯಕ್ಷ ಗುರು ಕಿಶೋರ್ ಗಟ್ಟಿ ಉಚ್ಚಿಲ ನಿರ್ದೇಶನದಲ್ಲಿ "ಶ್ರೀ ಕೃಷ್ಣ ಲೀಲೆ" ಎಂಬ ಯಕ್ಷಗಾನ ಪ್ರದರ್ಶನದೊಂದಿಗೆ ಜರಗಲಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಯಕ್ಷಗಾನ ಪ್ರದರ್ಶನದಲ್ಲಿ ತವರೂರ ಪ್ರಸಿದ್ಧ ಭಾಗವತರಾದ ಸತೀಶ್ ಶೆಟ್ಟಿ ಬೊಂದೆಲ್, ಚೆಂಡೆ ಮದ್ದಳೆಯಲ್ಲಿ ಸುಬ್ರಹ್ಮಣ್ಯ ಭಟ್ ದೇಲಾಂತ ಮಜಲು, ಹಿರಣ್ಣಯ್ಯ ಆಚಾರ್ಯ, ವೇಷಭೂಷಣದಲ್ಲಿ ಪ್ರಸಾದ್ ಕಾಯರ್ ಕಟ್ಟೆ ಮತ್ತು ಯಕ್ಷ ಮಿತ್ರರು ತಂಡದ ಹವ್ಯಾಸಿ ಕಲಾವಿದರೊಂದಿಗೆ "ಶ್ರೀ ಕೃಷ್ಣ ಲೀಲೆ" ಎಂಬ ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.