ಇಸ್ಲಾಮಾಬಾದ್, ಆ. 09 (DaijiworldNews/AA): ಪಾಕಿಸ್ತಾನದ ರೆಸ್ಟೋರೆಂಟ್ನಲ್ಲಿ ಆಹಾರ ಸೇವಿಸಿದ ಗಂಟೆಗಳ ನಂತರ ಲಷ್ಕರ್ ಕಮಾಂಡರ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಮಾಂಡರ್ ಖಾರಿ ಸಯೀದ್ ಅಬ್ದುಲ್ ಅಜೀಜ್, ಪ್ರಾರ್ಥನೆ ಸಲ್ಲಿಸಲು ಕುಬಾ ಮಸೀದಿಗೆ ಬರುವ ಮೊದಲು ಪರಿಚಯವಿಲ್ಲದ ರೆಸ್ಟೋರೆಂಟ್ನಲ್ಲಿ ಆಹಾರ ಸೇವಿಸಿದ್ದ. ನಂತರ ಆತ ಇದ್ದಕ್ಕಿದ್ದಂತೆ ಮಸೀದಿಯ ದ್ವಾರದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮೃತ ಖಾರಿ ಸಯೀದ್ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್ಕೌಂಟರ್ಗಳಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರ ಕುಟುಂಬಗಳಿಗೆ ನೆರವು ನೀಡುವ ಲಷ್ಕರ್ ಇಲಾಖೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ.