ಕೈವ್,ಆ. 08 (DaijiworldNews/AK): ಉಕ್ರೇನ್ ರಾಜಧಾನಿ ಕೈವ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ರಷ್ಯಾ ನಡೆಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿಯಲ್ಲಿ 3 ವರ್ಷದ ಮಗು ಸೇರಿದಂತೆ 4 ಜನರು ಸಾವನ್ನಪ್ಪಿದ್ದಾರೆ.

ಕೈವ್ ಪ್ರದೇಶದ ಬ್ರೋವರಿ ಜಿಲ್ಲೆಯಲ್ಲಿ ರಷ್ಯಾದ ಹಲವಾರು ಡ್ರೋನ್ಗಳು ಮನೆಯೊಂದನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ. ಈ ದಾಳಿಯಲ್ಲಿ ಅಜ್ಜ, ಅಜ್ಜಿ ಮತ್ತು ಅವರ 3 ವರ್ಷದ ಮೊಮ್ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ ಕುಟುಂಬದ ಇನ್ನಿಬ್ಬರು ಸದಸ್ಯರು ಹಾಗೂ ನೆರವಿಗೆ ಬಂದ ನೆರೆಹೊರೆಯವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಕ್ರೇನ್ನ ಉತ್ತರ ಭಾಗದ ಚೆರ್ನಿಹಿವ್ ಪ್ರದೇಶದ ಮೇಲೆಯೂ ರಷ್ಯಾ ಡ್ರೋನ್ ದಾಳಿ ನಡೆಸಿದ್ದು, ಪ್ರಿಲುಕಿ ಜಿಲ್ಲೆಯ ಗೋದಾಮೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಇಲ್ಲಿ ಇಲ್ಲಿಯವರೆಗೆ ಯಾವುದೇ ಸಾವು-ನೋವಿನ ವರದಿಯಾಗಿಲ್ಲ.