ಇಸ್ಲಾಮಾಬಾದ್, ಆ. 01 (DaijiworldNews/AK): ವಿಶ್ವದ 12 ನೇ ಅತಿ ಎತ್ತರದ ಪರ್ವತಾರೋಹಿ ಬ್ರಾಡ್ ಪೀಕ್ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಲೆಜೆಂಡರಿ ಪರ್ವತಾರೋಹಿ ನಿರ್ಮಲ್ ಪುರ್ಜಾ ದುರಂತ ಸಾವಿಗೀಡಾಗಿದ್ದಾರೆ.

ಹಿಮಪಾತ ಸಂಭವಿಸಿದ ನಂತರ ಪುರ್ಜಾ ಮತ್ತು ಇತರ ಐವರು ಪರ್ವತಾರೋಹಿಗಳು ಶುಕ್ರವಾರದಿಂದ ಕಾಣೆಯಾಗಿದ್ದರು. ಇಂದು, ಬ್ರಾಡ್ ಪೀಕ್ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ನಿರ್ಮಲ್ ಪುರ್ಜಾ ದುರಂತ ಸಾವಿಗೀಡಾಗಿದ್ದಾರೆ ಎಂದು ನಾವು ತೀವ್ರ ದುಃಖದಿಂದ ತಿಳಿಸುತ್ತಿದ್ದೇವೆ. ಇವರ ಜೊತೆ ಇನ್ನೂ ಐವರು ಸದಸ್ಯರು ಮೃತಪಟ್ಟಿದ್ದಾರೆ ಎಂದು ನೇಪಾಳಿ ಮೂಲದ ಪರ್ವತಾರೋಹಿ ಮತ್ತು ಇತರರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬ್ರಾಡ್ ಪೀಕ್ ಕಾರಕೋರಂ ಪರ್ವತ ಶ್ರೇಣಿಯಲ್ಲಿದೆ. ಇದು ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಚೀನಾದ ಕ್ಸಿನ್ಜಿಯಾಂಗ್ ನಡುವಿನ ಗಡಿಯಲ್ಲಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿ ಕೆ 2 ನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ. ಬ್ರಾಡ್ ಪೀಕ್ನ ಸ್ಟ್ಯಾಂಡರ್ಡ್ ವೆಸ್ಟ್ ರಿಡ್ಜ್ ಮಾರ್ಗದಲ್ಲಿ ಹಿಮಪಾತ ಸಂಭವಿಸಿದೆ. ಇದು 21,600 ರಿಂದ 21,850 ಅಡಿ ಎತ್ತರದಲ್ಲಿದೆ.
ಪುರ್ಜಾ ಬ್ರಿಟನ್ನ ಗೂರ್ಖಾಗಳ ಬ್ರಿಗೇಡ್ ಮತ್ತು ರಾಯಲ್ ಮೆರೀನ್ಗಳ ಎಲೈಟ್ ಸ್ಪೆಷಲ್ ಬೋಟ್ ಸರ್ವಿಸ್ ನ ಮಾಜಿ ಸದಸ್ಯರೂ ಆಗಿದ್ದರು. ಪೂರ್ಣಾವಧಿಯ ಪರ್ವತಾರೋಹಿಯಾಗಿದ್ದರು. ಹಲವಾರು ಪರ್ವತಾರೋಹಣ ದಾಖಲೆಗಳನ್ನು ಬರೆದಿದ್ದಾರೆ.
2019 ರಲ್ಲಿ, ಅವರು ತಮ್ಮ ‘ಪ್ರಾಜೆಕ್ಟ್ ಪಾಸಿಬಲ್’ ಪರ್ವತಾರೋಹಣದಲ್ಲಿ ಕೇವಲ ಆರು ದಿನಗಳಲ್ಲಿ 8,000 ಮೀಟರ್ಗಿಂತ ಹೆಚ್ಚಿನ 14 ಪರ್ವತಗಳನ್ನು ಏರುವ ಮೂಲಕ ಇತಿಹಾಸ ಸೃಷ್ಟಿಸಿದರು.