ರೋಮ್, ಮೇ. 20 (DaijiworldNews/AA): ರೋಮ್ಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸ್ವಾಗತ ಕೋರಿದ್ದಾರೆ. ಮೋದಿ ಅವರೊಂದಿಗಿನ ಸೆಲ್ಫಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೆಲೋನಿ ಹಂಚಿಕೊಂಡಿದ್ದು, 'ರೋಮ್ಗೆ ಸ್ವಾಗತ, ನನ್ನ ಸ್ನೇಹಿತ' ಎಂದು ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರೋಮ್ಗೆ ತೆರಳಿದ್ದಾರೆ. ಇಟಲಿಯ ರೋಮ್ನ ಐತಿಹಾಸಿಕ ಕೇಂದ್ರದಲ್ಲಿರುವ ಕೊಲೊಸಿಯಮ್ ಎಂಬ ಪ್ರಾಚೀನ ಆಂಫಿಥಿಯೇಟರ್ನಲ್ಲಿ ಮೋದಿ ಜೊತೆಗಿನ ಫೋಟೊವನ್ನು ಮೆಲೋನಿ ಹಂಚಿಕೊಂಡಿರುವ ಪ್ರಧಾನಿ ಮೆಲೋನಿ, 'ರೋಮ್ಗೆ ಸ್ವಾಗತ, ನನ್ನ ಸ್ನೇಹಿತ' ಎಂದು ಎಕ್ಸ್ ಪೋಸ್ಟ್ ಹಂಚಿಕೊಂಡಿದ್ದಾರೆ.
ವೈರಲ್ ಆಗಿರುವ ಈ ಫೋಟೋಗೆ 10 ಲಕ್ಷಕ್ಕಿಂತಲೂ ಹೆಚ್ಚು ವೀವ್ಸ್, ಸುಮಾರು 60,000 ಲೈಕ್ಗಳು ಮತ್ತು 2,000 ಕ್ಕೂ ಹೆಚ್ಚು ಕಾಮೆಂಟ್ಗಳು ಬಂದಿವೆ. ಪ್ರಧಾನಿ ಮೋದಿ ಅವರು ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಇಟಲಿಗೂ ಮೊದಲು ನಾರ್ವೆ, ಯುಎಇ, ನೆದರ್ಲ್ಯಾಂಡ್ಸ್ ಮತ್ತು ಸ್ವೀಡನ್ಗೆ ಮೋದಿ ಭೇಟಿ ನೀಡಿದ್ದರು.
ಇನ್ನು ಪ್ರಧಾನಿ ಮೋದಿ ಇಟಲಿ ಪ್ರಧಾನಿ ಮೆಲೋನಿ ಅವರೊಂದಿಗಿನ ಅಧಿಕೃತ ಮಾತುಕತೆಗೂ ಮುನ್ನ ರೋಮ್ನಲ್ಲಿ ನಡೆದ ಭೇಟಿಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮೋದಿ, 'ನಿನ್ನೆ ಸಂಜೆ ರೋಮ್ನಲ್ಲಿ ಪ್ರಧಾನಿ ಮೆಲೋನಿ ಅವರನ್ನು ಭೇಟಿಯಾದೆ. ಇಂದು ನಮ್ಮ ಮಾತುಕತೆಗಾಗಿ ಎದುರು ನೋಡುತ್ತಿದ್ದೇನೆ' ಎಂದು ತಿಳಿಸಿದ್ದಾರೆ.