ವಾಷಿಂಗ್ಟನ್, ಮೇ. 16 (DaijiworldNews/AA): ಹಿರಿಯ ಐಸಿಸ್ ಕಮಾಂಡರ್ನನ್ನು ಅಮೆರಿಕ ಮತ್ತು ನೈಜೀರಿಯಾ ಪಡೆಗಳು ಹತ್ಯೆ ಮಾಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಶುಕ್ರವಾರ ಇಟಿ ಟ್ರುತ್ ಸೋಶಿಯಲ್ ಪೋಸ್ಟ್ನಲ್ಲಿ ಮಾಹತಿ ಹಂಚಿಕೊಂಡಿರುವ ಅವರು, 'ನನ್ನ ನಿರ್ದೇಶನದ ಮೇರೆಗೆ ಧೈರ್ಯಶಾಲಿ ಅಮೆರಿಕನ್ ಪಡೆಗಳು ಮತ್ತು ನೈಜೀರಿಯಾದ ಸಶಸ್ತ್ರ ಪಡೆಗಳು ವಿಶ್ವದ ಅತ್ಯಂತ ಸಕ್ರಿಯ ಭಯೋತ್ಪಾದಕನನ್ನು ಕಾರ್ಯಾಚರಣೆ ನಡೆಸಿ ಹೊಡೆದುರುಳಿಸಿವೆ. ಐಸಿಎಸ್ ಎರಡನೇ ಕಮಾಂಡರ್ ಅಬು ಬಿಲಾಲ್ ಅಲ್ ಮಿನುಕಿ ಹತ್ಯೆಯಾಗಿದ್ದಾನೆ. ಉಗ್ರ ಇನ್ಮುಂದೆ ಆಫ್ರಿಕಾ ಜನರನ್ನು ಭಯಭೀತಗೊಳಿಸಲ್ಲ. ಅಮೆರಿಕರನ್ನು ಟಾರ್ಗೆಟ್ ಮಾಡಿ ಕಾರ್ಯಾಚರಣೆ ನಡೆಸಲ್ಲ' ಎಂದು ತಿಳಿಸಿದ್ದಾರೆ.
'ಅಲ್-ಮಿನುಕಿ ಆಫ್ರಿಕಾದಲ್ಲಿ ಅಡಗಿಕೊಳ್ಳಬಹುದೆಂದು ಭಾವಿಸಿದ್ದರು. ಆದರೆ, ಆತ ಏನು ಮಾಡುತ್ತಿದ್ದಾನೆಂದು ನಮಗೆ ತಿಳಿಸುವ ಮೂಲಗಳು ನಮ್ಮಲ್ಲಿದ್ದವು. ಈ ವಿಚಾರ ಆತನಿಗೆ ಗೊತ್ತಿರಲಿಲ್ಲ. ನೈಜೀರಿಯಾ ಸರ್ಕಾರದ ಸಹಕಾರಕ್ಕೆ ಧನ್ಯವಾದ' ಎಂದಿದ್ದಾರೆ.