ವಾಷಿಂಗ್ಟನ್, ಮೇ. 08 (DaijiworldNews/AA): ನಮ್ಮ ತಾಳ್ಮೆ ಪರೀಕ್ಷಿಸಬೇಡಿ. ಶೀಘ್ರ ಒಪ್ಪಂದಕ್ಕೆ ಬನ್ನಿ, ಇಲ್ಲವಾದರೆ ಮುಂದಿನ ಹೊಡೆತ ಇನ್ನಷ್ಟು ಭೀಕರವಾಗಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ಗೆ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾಪಡೆಯ ಮೇಲೆ ನಡೆದ ದಾಳಿ ಪ್ರಯತ್ನದ ಬಳಿಕ ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್ ಮಾಡಿರುವ ಅವರು, "ಅಮೆರಿಕ ಶಾಂತಿಯನ್ನು ಬಯಸುತ್ತದೆ. ಆದರೆ. ಮ್ಮ ಸೇನೆ ಮತ್ತು ರಾಷ್ಟ್ರದ ಭದ್ರತೆಯೊಂದಿಗೆ ಆಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಇರಾನ್ ತಕ್ಷಣ ಮಾತುಕತೆಗೆ ಬಂದು ಒಪ್ಪಂದಕ್ಕೆ ಬರಬೇಕು" ಎಂದು ತಿಳಿಸಿದ್ದಾರೆ.
ಜೊತೆಗೆ, "ಮುಂದಿನ ದಿನಗಳಲ್ಲಿ ಇದೇ ರೀತಿಯ ದಾಳಿಗಳು ಮರುಕಳಿಸಿದರೆ ಅಮೆರಿಕದ ಪ್ರತಿಕ್ರಿಯೆ ಇನ್ನಷ್ಟು ಕಠಿಣವಾಗಲಿದೆ. ಅಮೆರಿಕದ ನೌಕಾಪಡೆಯ ಮೇಲೆ ದಾಳಿ ನಡೆಸಲು ಯತ್ನಿಸಿದವರಿಗೆ ಈಗಾಗಲೇ ಭಾರೀ ಹಾನಿಯಾಗಿದೆ. ಮುಂದೆಯೂ ಇದೇ ರೀತಿ ಮುಂದುವರಿದರೆ, ಇನ್ನೂ ಕಠಿಣವಾಗಿ ಪ್ರತಿಕ್ರಿಯಿಸುತ್ತೇವೆ. ಜೊತೆಗೆ, ಇರಾನ್ ಶೀಘ್ರದಲ್ಲೇ ಒಪ್ಪಂದಕ್ಕೆ ಬರದಿದ್ದರೆ ಮತ್ತಷ್ಟು ತೀವ್ರ ಸೈನಿಕ ಕ್ರಮ ಕೈಗೊಳ್ಳಬಹುದು" ಎಂದು ಸೂಚಿಸಿದ್ದಾರೆ.