ಟೆಹ್ರಾನ್, ಮಾ. 30 (DaijiworldNews/AA): ಇರಾನ್ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಯಿಂದ ಹೊಸ ಸಂದೇಶ ಬಿಡುಗಡೆಯಾಗಿದೆ. ಲಿಖಿತ ಸಂದೇಶದಲ್ಲಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಇರಾನ್ ಜನರು ನೀಡಿದ ಬೆಂಬಲಕ್ಕೆ ಅವರು ಧನ್ಯವಾದ ತಿಳಿಸಿದ್ದಾರೆ ಎಂಬುದಾಗಿ ಇರಾನಿನ ಮಾಧ್ಯಮಗಳು ವರದಿ ಮಾಡಿವೆ.

ಅಯತೊಲ್ಲಾ ಖಮೇನಿ ನಿಧನದ ನಂತರ ಹೊಸ ಸರ್ವೋಚ್ಚ ನಾಯಕ ಕಾಣಿಸಿಕೊಂಡಿಲ್ಲ, ಇಲ್ಲಿಯವರೆಗೆ ಕೆಲವೇ ಲಿಖಿತ ಹೇಳಿಕೆಗಳನ್ನು ನೀಡಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಅವರ ಇರುವಿಕೆಯ ಬಗ್ಗೆ ಅನುಮಾನ ಮೂಡಿಸಿತ್ತು. ಇದೇ ವೇಳೆ ಟ್ರಂಪ್ ಕೂಡ ಮೊಜ್ತಬಾ ಬದುಕಿರುವುದು ಅನುಮಾನ ಎಂದು ತಿಳಿಸಿದ್ದರು.
ವಾಯುದಾಳಿಯಲ್ಲಿ ಉಂಟಾದ ಗಾಯಗಳಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ದೂರದರ್ಶನ ಮತ್ತು ಕೆಲವು ಇರಾನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸರ್ವೋಚ್ಚ ನಾಯಕರಾಗಿ ಅಧಿಕಾರ ವಹಿಸಿಕೊಂಡ ನಂತರ, ಮೊಜ್ತಬಾ ಖಮೇನಿ ಅವರು ಸರ್ವೋಚ್ಚ ನಾಯಕರಾಗಿ ತಮ್ಮ ಮೊದಲ ಹೇಳಿಕೆ ಮತ್ತು ಪರ್ಷಿಯನ್ ಹೊಸ ವರ್ಷವಾದ ನೌರುಜ್ ಸಂದರ್ಭದಲ್ಲಿ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.