ಇಸ್ಲಾಮಾಬಾದ್, ಮಾ. 29 (DaijiworldNews/AA): ಬಾತ್ರೂಮ್ನಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಾಜ್ವಾ ಸಾವನ್ನಪ್ಪಿದ್ದಾರೆ.

2026 ರ ಫೆಬ್ರವರಿಯಲ್ಲಿ ಬಾತ್ರೂಮ್ನಲ್ಲಿ ಜಾರಿಬಿದ್ದು ಬಾಜ್ವಾ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಬಳಿಕ ರಾವಲ್ಪಿಂಡಿಯ ಮಿಲಿಟರಿ ಆಸ್ಪತ್ರೆಯಲ್ಲಿ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇದೀಗ ಕೊನೆಯುಸಿರೆಳೆದಿದ್ದಾರೆ.
ಬಾಜ್ವಾ ಅವರು ಪಾಕ್ನ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಜನರಲ್ಗಳಲ್ಲಿ ಒಬ್ಬರೆಂದು ಹೆಸರು ವಾಸಿಯಾಗಿದ್ದರು. ಬಾಜ್ವಾ ಸರ್ಕಾರ ಆಡಳಿತದ ವಿಚಾರದಲ್ಲೂ ಮೂಗು ತೂರಿಸುತ್ತಿದ್ದರು.
ನವೆಂಬರ್ 2016 ರಿಂದ ನವೆಂಬರ್ 2022 ರವರೆಗೆ ಅವರು ಸೇನಾ ಮುಖ್ಯಸ್ಥರಾಗಿದ್ದ ಬಾಜ್ವಾ ಅವಧಿಯಲ್ಲೇ ಭಾರತ ಬಾಲಕೋಟ್ ಮೇಲೆ ಏರ್ಸ್ಟ್ರೈಕ್ ಮಾಡಿತ್ತು. ಈ ಏರ್ಸ್ಟ್ರೈಕ್ ನಡೆದ ಬಳಿಕ ತಮ್ಮ ಸಾರ್ವಜನಿಕ ಭಾಷಣದಲ್ಲಿ ಭಾರತ ನಮ್ಮ ಮೊದಲ ಶತ್ರು ಎಂದು ಅವರು ಹೇಳಿಕೆ ನೀಡಿದ್ದರು.