ಕತಾರ್, ಮಾ. 22 (DaijiworldNews/AA): ತಾಂತ್ರಿಕ ದೋಷದಿಂದ ಕತಾರ್ ರಕ್ಷಣಾ ಸಚಿವಾಲಯಕ್ಕೆ ಸೇರಿದ ಹೆಲಿಕಾಪ್ಟರ್ ಪತನಗೊಂಡು 6 ಮಂದಿ ಮೃತಪಟ್ಟು, ಓರ್ವ ನಾಪತ್ತೆಯಾಗಿರುವ ಘಟನೆ ಕತಾರ್ನ ಪ್ರಾದೇಶಿಕ ಜಲಪ್ರದೇಶದಲ್ಲಿ ಸಂಭವಿಸಿದೆ.

ಈ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಈ ಕುರಿತು ಕತಾರ್ ರಕ್ಷಣಾ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಹೆಲಿಕಾಪ್ಟರ್ನಲ್ಲಿ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.
ನಾಪತ್ತೆಯಾಗಿರುವ ಓರ್ವನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಘಟನೆ ಕುರಿತು ಆಂತರಿಕ ಸಚಿವಾಲಯ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದೆ.