ಬಹರೈನ್, ಫೆ. 10 (DaijiworldNews/AK): ಕನ್ನಡ ಸಂಘ ಬಹರೈನ್ ವತಿಯಿಂದ ದಿವಂಗತ ಸದಸ್ಯ ಆನಂದ್ ಲೋಬೋ ಅವರಿಗೆ ಸಂತಾಪ ಸೂಚಿಸಲು ಇಂದು ಕನ್ನಡ ಭವನದಲ್ಲಿ ಸಂತಾಪ ಸಭೆಯನ್ನು ಆಯೋಜಿಸಲಾಯಿತು.




ಫೆಬ್ರವರಿ 5ರಂದು ಅಕಾಲಿಕವಾಗಿ ನಿಧನರಾದ ಆನಂದ್ ಲೋಬೋ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಸಂಘದ ನೂರಾರು ಸದಸ್ಯರು, ಬಂಧುಗಳು ಹಾಗೂ ಹಿತೈಷಿಗಳು ಭಾಗವಹಿಸಿ, ದಿವಂಗತರ ದಿವ್ಯಾತ್ಮಕ್ಕೆ ಪ್ರಾರ್ಥನೆ ಸಲ್ಲಿಸಿ ಶೋಕಸಂತಾಪ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಹಿರಿಯ ಸದಸ್ಯರಾದ ಹಾಜಿ ಅಬ್ದುಲ್ ರಜಾಕ್, ಶಿವಾನಂದ ಪಾಟೀಲ್, ಜಗನ್ನಾಥ ಶೆಟ್ಟಿ, ಪ್ರಕಾಶ್ ಅಂಚನ್, ಉಪಾಧ್ಯಕ್ಷ ನಿತಿನ್ ಶೆಟ್ಟಿ, ಹಾಗೂ ಸದಸ್ಯರಾದ ಪ್ರದೀಪ್ ಆರ್. ಶೆಟ್ಟಿ, ಆಶ್ವಿನಿ ಅನಿಲ್, ಸುಜಯ್, ವಿಶಾಲ್ ಕೃಷ್ಣ ಶೆಟ್ಟಿ, ಜಾನ್ ದೀಪಕ್, ಮತ್ತು ಗಣೇಶ್ ಮಾಣಿಲ ಅವರುಗಳು ಮಾತನಾಡಿ, ದಿವಂಗತ ಆನಂದ್ ಲೋಬೋ ಅವರ ಗೌರವಾರ್ಥ ನುಡಿನಮನ ಸಲ್ಲಿಸಿದರು.
ಸಂತಾಪ ಸಭೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ರಾಮಪ್ರಸಾದ್ ಅಮ್ಮೆನಡ್ಕ ಅವರು ನಿರೂಪಿಸಿದರು.