ಟೊರೊಂಟೋ, ಫೆ. 09 (DaijiworldNews/AA): ಕೆನಡಾದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಕನ್ನಡಿಗನ ಮೇಲೆ ಹತ್ತಾರು ಬಾರಿ ಗುಂಡಿನ ದಾಳಿ ನಡೆಸಿ ಬರ್ಬರ ಕೊಲೆ ಮಾಡಲಾಗಿದೆ.

ನೆಲಮಂಗಲ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್(37) ಹತ್ಯೆಯಾದ ವ್ಯಕ್ತಿ.
ಕೆನಡಾದ ಕಂಪನಿಯೊಂದರಲ್ಲಿ ಚಂದನ್ ಕುಮಾರ್ ಕಂಪನಿ ಕೆಲಸ ಮಾಡುತ್ತಿದ್ದರು. 6 ವರ್ಷದಿಂದ ಕೆನಡಾದಲ್ಲಿದ್ದರು. ಚಂದನ್ ಅವರ ಪೋಷಕರಿಗೆ ನಿನ್ನೆ ಟೊರೊಂಟೋ ಪೊಲೀಸರು ಕರೆ ಮಾಡಿ ಕೊಲೆಯಾದ ಬಗ್ಗೆ ಮಾಹಿತಿ ನೀಡಿದ್ದಾರೆ.
ರಾತ್ರಿ 8 ಗಂಟೆಗೆ ಚಂದನ್ ಮೃತಪಟ್ಟಿದ್ದಾನೆ ಎಂಬ ಸುದ್ದಿ ಬಂತು. ಮೊನ್ನೆ ಶುಕ್ರವಾರ ಕಡೆಯದಾಗಿ ಮಾತನಾಡಿದ್ದ. ಹುಡುಗಿಯನ್ನು ನೋಡಿ ಮದುವೆ ಮಾಡುವ ಆಸೆ ಇತ್ತು. ಕೆಲಸದಿಂದ ರಜೆ ಪಡೆದು ಬರುತ್ತೇನೆ ಎಂದಿದ್ದ. ನನಗೆ ಏನು ಹೇಳಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಮಗನ ಮೃತ ದೇಹ ನಮ್ಮ ಮನೆಗೆ ಕರೆ ತರುವ ಕೆಲಸ ಮಾಡಿ ಎಂದು ಮೃತ ಚಂದನ್ ತಂದೆ ನಿವೃತ್ತ ಶಿಕ್ಷಕ ನಂದ ಕುಮಾರ್ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.