ಜಪಾನ್, ಡಿ. 12 (DaijiworldNews/AA): ಜಪಾನ್ನಲ್ಲಿ 6.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ 5 ಬಾರಿ ಭೂಮಿ ಕಂಪಿಸಿದೆ ಎಂದು ತಿಳಿದುಬಂದಿದೆ.

ಭೂಕಂಪದಿಂದ ಉಂಟಾದ ಹಾನಿಯ ಪ್ರಮಾಣ ಇನ್ನೂ ತಿಳಿದುಬಂದಿಲ್ಲ ಆದರೆ 33 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಭದ್ರತಾ ಸಂಸ್ಥೆಗಳು ಮಾಹಿತಿಯನ್ನು ಸಂಗ್ರಹಿಸುತ್ತಿವೆ. ಈ ಬಗ್ಗೆ ವಿವರವಾದ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಭೂಕಂಪದ ಕೇಂದ್ರಬಿಂದು ಮೇಲ್ಮೈಯಿಂದ ಕೇವಲ 10 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದೆ. ಹೆಚ್ಚಿನ ಹಾನಿ ಸಂಭವಿಸುವ ಸಾಧ್ಯತೆ ಇದೆ. ಕಳೆದ 24 ಗಂಟೆಗಳಲ್ಲಿ ಜಪಾನ್ನಲ್ಲಿ ಸಂಭವಿಸಿದ ಐದನೇ ಭೂಕಂಪ ಇದಾಗಿದೆ. ಜಪಾನ್ ಹವಾಮಾನ ಸಂಸ್ಥೆ ಪ್ರಕಾರ, ಶುಕ್ರವಾರ ಈಶಾನ್ಯ ಜಪಾನ್ನಲ್ಲಿ 6.7 ತೀವ್ರತೆಯ ಭೂಕಂಪ ಸಂಭವಿಸಿದೆ. ಸುನಾಮಿ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.
ಭೂಕಂಪದ ಬೆನ್ನಲ್ಲೆ ಜಪಾನ್ ಹವಾಮಾನ ಸಂಸ್ಥೆಯು 1 ಮೀಟರ್ ಎತ್ತರದ ಅಲೆಗಳು ಏಳಬಹುದು. ಹೊಕ್ಕೈಡೋದ ಮಧ್ಯ ಪೆಸಿಫಿಕ್ ಕರಾವಳಿ, ಅಮೋರಿ ಪ್ರಿಫೆಕ್ಚರ್, ಇವಾಟೆ ಪ್ರಿಫೆಕ್ಚರ್ ಮತ್ತು ಮಿಯಾಗಿ ಪ್ರಿಫೆಕ್ಚರ್ಗಳಿಗೆ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿದೆ.
ಈ ವಾರದ ಆರಂಭದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಪೆಸಿಫಿಕ್ ಮಹಾಸಾಗರದ ಕರಾವಳಿಯಲ್ಲಿ ಬಿರುಕುಗಳು, ಸಣ್ಣ ಹಾನಿ ಮತ್ತು ಸುನಾಮಿಯನ್ನು ಉಂಟು ಮಾಡಿತ್ತು. ಜಪಾನ್ನ ಪ್ರಮುಖ ದ್ವೀಪವಾದ ಹೊನ್ಶುವಿನ ಉತ್ತರದ ತುದಿಯಲ್ಲಿರುವ ಅಮೋರಿ ಕರಾವಳಿಯಲ್ಲಿ ಸೋಮವಾರ ಭೂಕಂಪ ಸಂಭವಿಸಿತ್ತು. ಇದರಲ್ಲಿ ಕನಿಷ್ಠ 34 ಜನರು ಗಾಯಗೊಂಡಿದ್ದರು.