ಬ್ರೆಜಿಲ್, ಜು. 07 (DaijiworldNews/TA): ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್ನಲ್ಲಿ ಭಾನುವಾರ ಪೋಸ್ಟ್ ಮಾಡಿದ ಉಗ್ರ ಸಂದೇಶದಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಕ್ಸ್ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ದೇಶಗಳಿಗೆ ಕಠಿಣ ಎಚ್ಚರಿಕೆ ನೀಡಿ, ಅವು ತೀವ್ರ ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಘೋಷಿಸಿದ್ದಾರೆ.

"ಬ್ರಿಕ್ಸ್ನ ಅಮೆರಿಕ ವಿರೋಧಿ ನೀತಿಗಳನ್ನು ಬೆಂಬಲಿಸುವ ಯಾವುದೇ ದೇಶಕ್ಕೆ ಹೆಚ್ಚುವರಿಯಾಗಿ 10% ಸುಂಕ ವಿಧಿಸಲಾಗುತ್ತದೆ. ಈ ನೀತಿಗೆ ಯಾವುದೇ ವಿನಾಯಿತಿ ಇರುವುದಿಲ್ಲ" ಎಂದು ಟ್ರಂಪ್ ಬರೆದಿದ್ದಾರೆ. ಟ್ರಂಪ್ ಈ ಹೇಳಿಕೆಯಲ್ಲಿ ಅಮೆರಿಕ ವಿರೋಧಿ ನೀತಿಗಳು ಎಂದರೆ ಏನೆಲ್ಲಾ ಅಡಕವಾಗಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡುವ ಒಂದು ದಿನದ ಮೊದಲು ಬ್ರಿಕ್ಸ್(ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ)ನಾಯಕರು ಅಮೆರಿಕದ ಅನಿಯಂತ್ರಿತ ಸುಂಕ ನೀತಿಯನ್ನು ಟೀಕಿಸಿದ್ದರು. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ನ ಮಿಲಿಟರಿ ಕ್ರಮವನ್ನು ಟೀಕಿಸಲಾಯಿತು.
ಬ್ರೆಜಿಲ್ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರಿಕ್ಸ್ ದೇಶಗಳಿಗೆ ದೊಡ್ಡ ಎಚ್ಚರಿಕೆ ನೀಡಿದ್ದಾರೆ. ಶೃಂಗಸಭೆಯ ಮೊದಲು, ಬ್ರಿಕ್ಸ್ ದೇಶಗಳು ಅಮೆರಿಕದ ಮೇಲೆ ನೇರವಾಗಿ ದಾಳಿ ಮಾಡಲಿಲ್ಲ ಆದರೆ ಹೆಚ್ಚುತ್ತಿರುವ ಸುಂಕವು ಜಾಗತಿಕ ವ್ಯಾಪಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಮತ್ತು ಅದು WTO ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದರು.
"TARIFF ಪತ್ರಗಳು, ಮತ್ತು/ಅಥವಾ ಡೀಲ್ಗಳು" ಎಂದು ಕರೆಯಲ್ಪಡುವ ಅಧಿಕೃತ US ಸುಂಕ ಸಂವಹನಗಳು ಜುಲೈ 7, ಸೋಮವಾರ ಪೂರ್ವ ಸಮಯ ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗುತ್ತವೆ ಎಂದು ಟ್ರಂಪ್ ತಮ್ಮ ಮುಂದಿನ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಯಾವ ದೇಶಗಳು ಈ ಪತ್ರಗಳನ್ನು ಸ್ವೀಕರಿಸುತ್ತವೆ ಅಥವಾ ಅವು ಯಾವ ನಿಯಮಗಳನ್ನು ಒಳಗೊಂಡಿರಬಹುದು ಎಂಬುದನ್ನು ಅವರು ನಿರ್ದಿಷ್ಟಪಡಿಸಲಿಲ್ಲ.