ಟೆಹ್ರಾನ್, ಜೂ. 20 (DaijiworldNews/AA): ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಧ್ಯೆ ಇರಾನ್ ತನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಗಳ ಹೊಸ ಗುಪ್ತಚರ ಮುಖ್ಯಸ್ಥರನ್ನು ನೇಮಕ ಮಾಡಿದೆ.

ನೂತನ ಗುಪ್ತಚರ ಮುಖ್ಯಸ್ಥರನ್ನಾಗಿ ಬ್ರಿಗೇಡಿಯರ್ ಜನರಲ್ ಮಜೀದ್ ಖಾದಾಮಿ ಅವರನ್ನು ನೇಮಿಸಲಾಗಿದೆ. ಐಆರ್ಜಿಸಿಯ ಕಮಾಂಡರ್ ಮೇಜರ್ ಜನರಲ್ ಮೊಹಮ್ಮದ್ ಪಕ್ಪುರ್ ಅವರು ಮಜೀದ್ ಖಾದ್ಮಿ ಅವರನ್ನು ನೇಮಕ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಹುದ್ದೆಯಲ್ಲಿದ್ದ ಹಿಂದಿನ ಅಧಿಕಾರಿ ಮೊಹಮ್ಮದ್ ಕಾಜ್ಮಿ ಇಸ್ರೇಲಿ ವಾಯುದಾಳಿಯ ಸಮಯದಲ್ಲಿ ಸಾವನ್ನಪ್ಪಿದ್ದರು. ಹೀಗಾಗಿ ಈ ಹುದ್ದೆಗೆ ಹೊಸ ನೇಮಕಾತಿ ಮಾಡಲಾಗಿದೆ. ಇಸ್ರೇಲ್ ನಡೆಸಿದ ಈ ದಾಳಿಯಲ್ಲಿ ಕಾಜ್ಮಿ ಜೊತೆಗೆ, ಇತರ ಇಬ್ಬರು ಉನ್ನತ ಅಧಿಕಾರಿಗಳಾದ ಹಸನ್ ಮೊಹಕ್ ಮತ್ತು ಮೊಹ್ಸಿನ್ ಬಾಘೇರಿ ಕೂಡ ಮೃತಪಟ್ಟಿದ್ದರು.
ಕಳೆದ ವಾರ ಇಸ್ರೇಲ್ ಇರಾನ್ನ ಪರಮಾಣು ಮತ್ತು ಮಿಲಿಟರಿ ನೆಲೆಗಳ ಮೇಲೆ ವಾಯುದಾಳಿ ನಡೆಸಿತ್ತು. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ. ಹೀಗಾಗಿ ಇದನ್ನು ತಡೆಯಲು ಇಸ್ರೇಲ್ ಹಾಗೂ ಅಮೆರಿಕ ಒಂದಾಗಿದೆ.
ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದೆ. ಇರಾನ್ ಗುರುವಾರ ಇಸ್ರೇಲ್ನ ದಕ್ಷಿಣ ಭಾಗದಲ್ಲಿರುವ ಮುಖ್ಯ ಆಸ್ಪತ್ರೆಯಾದ ಸೊರೊಕಾ ವೈದ್ಯಕೀಯ ಕೇಂದ್ರದ ಮೇಲೆ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಆಸ್ಪತ್ರೆಯ ಹಲವು ಭಾಗಗಳಿಗೆ ಭಾರೀ ಹಾನಿಯಾಗಿದ್ದು, ಅನೇಕ ಜನರು ಗಾಯಗೊಂಡಿದ್ದಾರೆ.