ವಾಷಿಂಗ್ಟನ್, ಜೂ. 09 (DaijiworldNews/AA): ಏರ್ಫೋರ್ಸ್ ಒನ್ ಮೆಟ್ಟಿಲುಗಳನ್ನು ಹತ್ತುವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಡವಿ ಬಿದ್ದಿದ್ದಾರೆ. ಟ್ರಂಪ್ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಟೀಕಿಸಲು ಶುರು ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ಭಾನುವಾರ ನ್ಯೂಜೆರ್ಸಿಯ ಮಾರಿಸ್ಟೌನ್ನಲ್ಲಿರುವ ಮಾರಿಸ್ಟೌನ್ ಮುನ್ಸಿಪಲ್ ವಿಮಾನ ನಿಲ್ದಾಣದಿಂದ ಕ್ಯಾಂಪ್ ಡೇವಿಡ್ಗೆ ಹೊರಡುವ ವೇಳೆ ಈ ಘಟನೆ ನಡೆದಿದೆ. ಏರ್ಫೋರ್ಸ್ ಒನ್ ಮೆಟ್ಟಿಲುಗಳನ್ನು ಹತ್ತುವಾಗ ಎಡವಿ ಬಿದ್ದ ಟ್ರಂಪ್ ಪುನಃ ತಮ್ಮನ್ನು ಸಾವರಿಸಿಕೊಂಡು, ಮೇಲೆದ್ದು ವಿಮಾನ ಹತ್ತಿದ್ದಾರೆ. ಟ್ರಂಪ್ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ರೂ ಕಾಲೆಳಿತದೆ ಕಾಲ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ಈ ಹಿಂದೆ ಸಾರ್ವಜನಿಕ ಸಮಾರಂಭಗಳಲ್ಲಿ ಜೋ ಬೈಡನ್ ಅವರ ಪರಿಸ್ಥಿತಿ ಬಗ್ಗೆ ಆಡಿಕೊಳ್ಳುತ್ತಿದ್ದುದ್ದನ್ನು ನೆನಪಿಸಿಕೊಂಡ ನೆಟ್ಟಿಗರು ಟ್ರಂಪ್ ಕಾಲೆಳೆದಿದ್ದಾರೆ. ಬೈಡನ್ ಅವರನ್ನು ಅಣುಕಿಸಿದ್ದು 'ಈಗ ನೆನಪಾಯ್ತಾ? ಅಂತ ಪ್ರಶ್ನೆ ಮಾಡಿರೋದಲ್ಲದೇ ಕಾಲವೇ ಎಲ್ಲದಕ್ಕೂ ಉತ್ತರಿಸುತ್ತದೆ. ಟ್ರಂಪ್ಗೆ ವಯಸ್ಸಾಗಿದೆ, ವ್ಹೀಲ್ ಚೇರ್ನಲ್ಲಿ ಕೂರಲು ಇದು ಸೂಕ್ತ ಸಮಯ' ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಈ ಹಿಂದೆ ಜೋ ಬೈಡನ್ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಏರ್ಫೋರ್ಸ್ 1 ಮೆಟ್ಟಿಲು ಹತ್ತುವ ವೇಳೆ ಜಾರಿ ಬಿದ್ದಿದ್ದರು. ಈ ಘಟನೆಯನ್ನು ಟ್ರಂಪ್ ಸೇರಿದಂತೆ ಅನೇಕ ಜೋ ಬೈಡನ್ ವಿರೋಧಿಗಳು ತಮ್ಮ ಪ್ರಚಾರಕ್ಕಾಗಿ ಬಳಸಿಕೊಂಡಿದ್ದರು. 'ಇಂತಹ ವಯಸ್ಸಾದ ಮತ್ತು ದೈಹಿಕ ಅಸಮರ್ಥತೆ ಹೊಂದಿರುವ ನಾಯಕ ಅಮೆರಿಕಕ್ಕೆ ಅವಶ್ಯಕತೆ ಇಲ್ಲ' ಎಂದು ಬೈಡನ್ ಅವರ ದೈಹಿಕ ಕ್ಷಮತೆಯ ಬಗ್ಗೆ ಟ್ರಂಪ್ ಕುಹಕವಾಡಿದ್ದರು.