ವ್ಯಾಟಿಕನ್ ಸಿಟಿ,ಏ.25 (DaijiworldNews/AK): ಅನಾರೋಗ್ಯದಿಂದ ಸೋಮವಾರ ನಿಧನರಾದ ಕ್ರಿಶ್ಟಿಯನ್ ಕ್ಯಾಥೋಲಿಕ್ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಶನಿವಾರ (ಏ.26) ನಡೆಯಲಿದೆ.

ವ್ಯಾಟಿಕನ್ ಸೆಂಟ್ ಪೀಟರ್ಸ್ ಬ್ಯಾಸಿಲಿಕಾದ ಎದುರು ಸ್ಥಳೀಯ ಕಾಲಮಾನ 10 ಗಂಟೆಗೆ ಪೋಪ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಫ್ರಾನ್ಸಿಸ್ ಅವರ ಇಚ್ಛೆಯಂತೆ ಮೃತದೇಹವನ್ನು ವ್ಯಾಟಿಕನ್ ಹೊರಗಡೆಯಿರುವ ಸೆಂಟ್ ಮೇರಿ ಬ್ಯಾಸಿಲಿಕಾದಲ್ಲಿ ಸಮಾಧಿ ಮಾಡಲಾಗುವುದು
ಇನ್ನು ಭಾರತದ ಪರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪೋಪ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯ ಸರ್ಕಾರದ ಪರವಾಗಿ ಕೆಜೆ ಜಾರ್ಜ್, ಐವಾನ್ ಡಿಸೋಜಾ ಪಾಲ್ಗೊಳ್ಳುತ್ತಿದ್ದಾರೆ.