ಮುಂಬೈ,ಮೇ9(Daijiworld News/KH):ಬಾಲಿವುಡ್ ನಟಿ ಸೋನಮ್ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ದಂಪತಿ ತಮ್ಮ ಮಗನ ಪೋಟೊವನ್ನು ಮೊದಲ ಬಾರಿಗೆ  ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ.

ಸೋನಮ್ ಕಪೂರ್ ಮತ್ತು ಆನಂದ್ ಅಹುಜಾ ಕೆಲವು ವರ್ಷಗಳಿಂದ ಪ್ರೀತಿಸಿ 8 ಮೇ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು 5 ವರ್ಷಗಳು ತುಂಬಿದ್ದು,  ಈ ಸಂತೋಷದಲ್ಲಿ ದಂಪತಿಗಳು ತಮ್ಮ ಮೊದಲ ಮಗುವಿನ ಮುಖವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೋನಮ್  ಕಪೂರ್  'ಸಾವರಿಯಾ' ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು, 'ಐ ಹೇಟ್ ಲವ್ ಸ್ಟೋರಿ ' ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ  ಏನಿಸಿಕೊಂಡರು.  
ಇಷ್ಟು ದಿನ ಕ್ಯಾಮೆರಾ ಕಣ್ಣಿಗೆ ಮಗ ವಾಯುನ ಮುಖ ಎಲ್ಲೂ  ಕಾಣದಂತೆ ದೂರ ಇಟ್ಟಿದ್ದರು. ಆದರೆ ಇದೀಗ ತಮ್ಮ ಮದುವೆ ವಾರ್ಷಿಕೋತ್ಸವದ  ಖುಷಿಯಿಂದ ಮಗ ವಾಯು ಫೋಟೋ ರಿವೀಲ್ ಮಾಡಿದ್ದಾರೆ.