ಮುಂಬೈ,ಏ.30(DaijiworldNews/KK):ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುವ  ‘ಐರಾವತ’ ಬೆಡಗಿ ಊರ್ವಶಿ ರೌಟೇಲಾ ಅವರು ಇದೀಗ ದುಬಾರಿ ಡ್ರೆಸ್ ಧರಿಸಿರುವ ಮೂಲಕ ಸುದ್ದಿಯಲ್ಲಿದ್ದಾರೆ. 

ನಟಿ ಊರ್ವಶಿ ರೌಟೇಲಾ ಅವರು ಇತ್ತೀಚಿಗೆ ಅವಾರ್ಡ್ ಫಂಕ್ಷನ್ವೊಂದರಲ್ಲಿ ಭಾಗವಹಿಸಿದ್ದು, ದುಬಾರಿ ಬೆಲೆಯ ಗೋಲ್ಡನ್ ಕಲರ್ ಡ್ರೆಸ್ನಲ್ಲಿ ರಾಯಲ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಫ್ಯಾಷನ್ ಈವೆಂಟ್ನಲ್ಲಿ ಡಿಸೈನರ್ ಮೋನಿಶಾ ಜೈಸಿಂಗ್ ಅವರ ಸ್ಪೆಷಲ್ ಕಲೆಕ್ಷನ್ನಲ್ಲಿ ಈ ಉಡುಪನ್ನು ನಟಿ ಆಯ್ಕೆ ಮಾಡಿದ್ದಾರೆ.  
ಇನ್ನು ಈ ಉಡುಪಿನಲ್ಲಿ  ಊರ್ವಶಿ ರೌಟೇಲಾ ಚಿನ್ನದಂತೆ ಕಂಗೋಳಿಸುತ್ತಿದ್ದು, ಇದರ ಬೆಲೆ  30 ಲಕ್ಷ ಎಂದು ಹೇಳಲಾಗುತ್ತಿದ್ದು, ಈ ಉಡುಪಿನ ಅಸಲಿ ಬೆಲೆ ಕೇಳಿ  ಜನರು  ಶಾಕ್ ಆಗಿದ್ದಾರೆ.