ಹೈದರಾಬಾದ್, ಅ.04 (DaijiworldNews/AA): ರಾಜಮೌಳಿ ನಿರ್ದೇಶನದ ವಾರಣಾಸಿ ಸಿನಿಮಾದಲ್ಲಿ ನಾಯಕನಾಗಿ ಮಹೇಶ್ ಬಾಬು, ವಿಲನ್ ಆಗಿ ಪೃಥ್ವಿರಾಜ್ ಸುಕುಮಾರನ್, ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ಇದೀಗ ಹಾಲಿವುಡ್ ನಟಿ ಡೈಸಿ ಜೆಸ್ಸಿಕಾ ಎಡ್ಗರ್ ಜೋನ್ಸ್ ಚಿತ್ರದ ಪ್ರಮುಖ ಪಾತ್ರವೊಂದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಬ್ರಿಟಿಷ್ ನಟಿ ಡೈಸಿ ಜೆಸ್ಸಿಕಾ ಎಡ್ಗರ್ ಜೋನ್ಸ್ ಅವರು 'ವಾರಣಾಸಿ' ಚಿತ್ರದ ಮೂಲಕ ಭಾರತೀಯ ಚಿತ್ರರಂಗವನ್ನು ಪ್ರವೇಶಿಸಲಿದ್ದಾರೆ. ಮಹೇಶ್ ಬಾಬು ಮತ್ತು ಡೈಸಿ ಇಬ್ಬರು ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಹೇಳಲಾಗುತ್ತಿದೆ. ಆದರೆ ಇದುವರೆಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇನ್ನು ಆರ್ಆರ್ಆರ್ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಎದುರಿನ ಬ್ರಿಟೀಷ್ ಯುವತಿ ಪಾತ್ರವಾದ 'ಜೆನ್ನಿ' ಪಾತ್ರಕ್ಕೆ ಮೊದಲು ಡೈಸಿ ಆಯ್ಕೆಯಾಗಿದ್ದರು. ಆದರೆ ವೈಯಕ್ತಿಕ ಕಾರಣಗಳು ಮತ್ತು ಡೇಟ್ಸ್ ಹೊಂದಾಣಿಕೆಯಾಗದೆ ಅವರು ಸಿನಿಮಾದಿಂದ ಹೊರನಡೆದಿದ್ದರು.