ಬೆಂಗಳೂರು, ಸೆ. 07 (DaijiworldNews/AK): ಖ್ಯಾತ ನಟಿ ರಮ್ಯಾ ಅವರಿಗೆ ಈಗ 43 ವರ್ಷ ವಯಸ್ಸು. ಸಿನಿಮಾದಲ್ಲಿ ಅವರು ಅಷ್ಟೇನೂ ಬ್ಯುಸಿ ಆಗಿಲ್ಲ. ಆದರೂ ಕೂಡ ಅವರು ಮದುವೆ ಬಗ್ಗೆ ಗಮನ ಹರಿಸಿಲ್ಲ. ಆದರೆ ಕಾರ್ಯಕ್ರಮವೊಂದರಲ್ಲಿ ಮದುವೆ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ಪತ್ರಕರ್ತೆ ನಬಿಲಾ ಜಮಾಲ್ ಕೇಳಿದ ಪ್ರಶ್ನೆಗೆ ರಮ್ಯಾ ಅವರು ಉತ್ತರಿಸಿದ್ದಾರೆ. ಮದುವೆಯ ಬಗ್ಗೆ ತಮಗೆ ಇರುವ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

‘ಮದುವೆ ಆಗುವುದು ಅಷ್ಟು ಮುಖ್ಯವೇ? ಖಂಡಿತಾ ಇಲ್ಲ. ನಾನು ಯಾರೆಂಬುದು ಮದುವೆಯಿಂದ ನಿರ್ಧಾರ ಆಗಲ್ಲ. ಮದುವೆ ಇಲ್ಲದೇ ನಾವು ಖುಷಿಯಾಗಿದ್ದೇವೆ ಅಲ್ಲವಾ? ಅಷ್ಟೇ.. ಖುಷಿಯಾಗಿ ಇರುವುದೇ ಎಲ್ಲಕ್ಕಿಂತ ಮುಖ್ಯ. ಒಂದೋ, ನೀವು ಮದುವೆ ಆಗಿರಬೇಕು ಅಥವಾ ಖುಷಿಯಾಗಿರಬೇಕು ಅಂತ ಹೇಳಲಾಗುತ್ತೆ. ಏನು ಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಿ’ ಎಂದು ರಮ್ಯಾ ಅವರು ಹೇಳಿದ್ದಾರೆ.
‘ತುಂಬಾ ಮಹಿಳೆಯವರಿಗೆ ಈ ಮಾತು ಅನ್ವಯ ಆಗದೇ ಇರಬಹುದು. ಮದುವೆ ಆಗಿಯೂ ನೀವು ಖುಷಿಯಾಗಿ ಇರಬಹುದು. ನಿಮಗೆ ಹೊಂದಿಕೆ ಆಗುವಂತಹ ಸಂಗಾತಿ ಸಿಕ್ಕರೆ ಚೆನ್ನಾಗಿರುತ್ತದೆ. ಅವರು ನಿಮ್ಮ ಉತ್ತಮ ಸ್ನೇಹಿತರಾಗಿದ್ದು, ಅವರ ಜೊತೆ ಇಡೀ ಜೀವನ ಕಳೆಯಲು ಬಯಸಿದರೆ ಅದು ಉತ್ತಮ’ ಎಂದು ಕೂಡ ರಮ್ಯಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಮನುಷ್ಯರಾಗಿ ನಮ್ಮ ಬದುಕಿನಲ್ಲಿ ಬದಲಾವಣೆ ಎಂಬುದು ನಿರಂತರವಾಗಿರುತ್ತದೆ. ನಾವು ಸದಾ ಬದಲಾಗುತ್ತಾ ಇರುತ್ತೇವೆ. ಅಲ್ಲೇ ಸಮಸ್ಯೆ ಎದುರಾಗುತ್ತದೆ. ನೀವು ಉತ್ತಮ ಸ್ನೇಹಿತರಾಗಿದ್ದು, ನಿಮ್ಮ ಮೌಲ್ಯಗಳು ಒಂದೇ ರೀತಿ ಇದ್ದರೆ ಮದುವೆ ಆಗುವುದು ಉತ್ತಮ ಎನಿಸುತ್ತದೆ. ಮದುವೆ ಆಗಿ ಖುಷಿಯಾಗಿ ಇರುವವರು ನನ್ನ ಈ ಮಾತನ್ನು ಒಪ್ಪುತ್ತಾರೆ ಎನಿಸುತ್ತದೆ ರಮ್ಯ ಎಂದಿದ್ದಾರೆ.
ನನಗೆ ಇನ್ನೂ ಆ ರೀತಿಯ ವ್ಯಕ್ತಿ ಸಿಕ್ಕಿಲ್ಲ. ನಾನು ಆ ಬಗ್ಗೆ ಗಮನ ಕೂಡ ಹರಿಸುತ್ತಿಲ್ಲ. ಕೆಲಸ ಮಾಡುವುದರಲ್ಲಿ ನಾನು ಬ್ಯುಸಿ ಆಗಿದ್ದೇನೆ. ರಿಲೇಷನ್ಶಿಪ್ಗೆ ಸಮಯ ಬೇಕು’ ಎಂದು ರಮ್ಯಾ ಅವರು ಹೇಳಿದ್ದಾರೆ.